ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಭವನದ ಒಳಹೊರಗು

ಮಿನುಗು ಮಿಂಚು
Last Updated 13 ಜುಲೈ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರಪತಿ ಭವನದಲ್ಲಿ ಯಾರು ವಾಸಿಸುತ್ತಾರೆ?
ಭಾರತದ ರಾಷ್ಟ್ರಪತಿಯ ಅಧಿಕೃತ ವಾಸಸ್ಥಳ ಅದು.

ಮೂಲತಃ ಅದನ್ನು ಯಾರಿಗಾಗಿ ನಿರ್ಮಿಸಿದ್ದು?
1911ರಲ್ಲಿ ಕೋಲ್ಕತ್ತದಿಂದ ದೆಹಲಿಗೆ ರಾಜ್ಯದ ರಾಜಧಾನಿ ಬದಲಾದಾಗ ಬ್ರಿಟಿಷ್ ವೈಸರಾಯ್ ವಾಸಕ್ಕೆಂದು ಅದನ್ನು ನಿರ್ಮಿಸಲಾಯಿತು. ಅದರ ನಿರ್ಮಾಣ ಕಾರ್ಯಕ್ಕೆ ಹಲವು ವರ್ಷಗಳೇ ಬೇಕಾದವು. ವೈಸರಾಯ್ ಅಲ್ಲಿ ವಾಸ ಮಾಡಲು ಸಾಧ್ಯವಾದದ್ದು 1929ರಲ್ಲಿ.

ಅದರ ವಾಸ್ತುಶಿಲ್ಪಿಗಳು ಯಾರು?
ಎಡ್ವಿನ್ ಲ್ಯೂಟ್ಯೆನ್ಸ್ ಹಾಗೂ ಹರ್ಬರ್ ಬೇಕರ್. ಒಂದು ಕೋಟಿ ನಲವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಆಗ ಅದನ್ನು ನಿರ್ಮಿಸಲಾಯಿತು.

ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೋಣೆಗಳಿವೆ?
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 340 ಕೋಣೆಗಳಿವೆ. ಅಷ್ಟೇ ಅಲ್ಲದೆ ದರ್ಬಾರ್, ಕೌನ್ಸಿಲ್ ಹಾಗೂ ಅಶೋಕ ಹಾಲ್‌ಗಳು ಅದರಲ್ಲಿವೆ. ಗ್ರಂಥಾಲಯ, ಮುದ್ರಣಾಲಯ, ಕಲಾ ಗ್ಯಾಲರಿ, ರಂಗಮಂಟಪ ಹಾಗೂ ಉಡುಗೊರೆಗಳನ್ನು ಸಂಗ್ರಹಿಸಿಡುವ ಹಾಲ್ (ತೋಶಾಖಾನಾ) ಅಲ್ಲಿವೆ. ವೈಸರಾಯ್‌ಗಳ ಕಾಲದಲ್ಲಿ ಮಹಿಳೆಯರು ಭೇಟಿಗಾಗಿ ಕಾಯುತ್ತಿದ್ದ ಕೋಣೆಗಳನ್ನು ಈಗ ರಾಷ್ಟ್ರಪತಿ ಹೆಚ್ಚಾಗಿ ಉಪಯೋಗಿಸುತ್ತಾರೆ.

ರಾಷ್ಟ್ರಪತಿ ಭವನದ ವಿಶಾಲ ಉದ್ಯಾನವನ್ನು ಮೊಘಲ್ ಉದ್ಯಾನ ಎಂದು ಏಕೆ ಕರೆಯುತ್ತಾರೆ?
ಉದ್ಯಾನವನ್ನು ಮೊಘಲರ ಕಾಲದಲ್ಲಿ ನಿರ್ಮಿಸಲಿಲ್ಲ. ಆದರೆ ಅದರ ಶೈಲಿ ಮೊಘಲರದ್ದು. ಉದ್ಯಾನದ ವಿವಿಧ ಸ್ತರಗಳು, ಕಾರಂಜಿ, ತಗ್ಗುಪ್ರದೇಶಗಳು ಮೊಘಲರ ಶೈಲಿಯಲ್ಲೇ ಇವೆ.
ಸಾರ್ವಜನಿಕರು ಪ್ರತಿವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ರಾಷ್ಟ್ರಪತಿ ಭವನವನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT