ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

Last Updated 4 ಡಿಸೆಂಬರ್ 2013, 8:59 IST
ಅಕ್ಷರ ಗಾತ್ರ

ಕುಕನೂರು: ಇಲ್ಲಿಯ ವಿದ್ಯಾನಂದ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢ­ಶಾಲೆಯ ವಿದ್ಯಾರ್ಥಿಗಳು ಮಧ್ಯಪ್ರದೇಶ ರಾಜ್ಯದ ಭೂಪಾಲ್‌ನಲ್ಲಿ ಜರುಗಲಿ­ರುವ ರಾಷ್ಟ್ರಮಟ್ಟದ ವಿಜ್ಞಾನ ಸಮಾ­ವೇಶಕ್ಕೆ ಆಯ್ಕೆ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲ­ಸಂಗಮದಲ್ಲಿ ನ. 30ರಿಂದ ಡಿ. 2ರ ವರೆಗೆ ಜರುಗಿದ ರಾಜ್ಯಮಟ್ಟದ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂ­ಡಿದ್ದ ವಿದ್ಯಾ­ರ್ಥಿ­ಗಳು ಶಕ್ತಿ–ಅನ್ವೇಷಣೆ, ಬಳಸಿ–ಉಳಿಸಿ ಎಂಬ ಕೇಂದ್ರ ವಿಷಯದ ಮೇಲೆ ತಯಾರಿಸಲಾಗಿದ್ದ ‘ಹೊಗೆ ರಹಿತ ಒಲೆ’ ಪ್ರಾತ್ಯಕ್ಷಿಕೆಯನ್ನು ಸಮಾವೇಶದಲ್ಲಿ ಪ್ರದರ್ಶಿಸಿದ್ದರು.

ಮಂಗಳವಾರ ಹಮ್ಮಿಕೊಂಡಿದ್ದ ಅಭಿ­ನಂದನಾ ಸಮಾರಂಭ ಉದ್ದೇಶಿಸಿ ಮಾರ್ಗ­ದರ್ಶಿ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಮಾತನಾಡಿದರು.

ತಂಡದ ನಾಯಕಿ ಸ್ವಾತಿ ಪಾಟೀಲ ಮಾತನಾಡಿದರು. ವಿದ್ಯಾನಂದ ಗುರು­ಕುಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ವಿ.ಜಹಗೀರದಾರ, ಪಾಲಿಟೆಕ್ನಿಕ್‌ ಪ್ರಾಚಾರ್ಯ ಎನ್‌.ಆರ್‌.ಕುಕನೂರು, ಪಿಯು ಪ್ರಾಚಾರ್ಯ ಕೆ.ಆರ್‌.ಕುಲಕರ್ಣಿ, ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಸ್ಥ ಎಸ್‌.ಎಲ್‌. ಲಮಾಣಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಡಿ.ಆರ್‌.ಕುಲಕರ್ಣಿ ಸಾಧನೆ­ಗೈದ ಸ್ವಾತಿ ಪಾಟೀಲ, ದೀಪಾ ಕಮತರ, ಅಂದಾನಮ್ಮ ಬಳಗೇರಿ, ತನುಜಾ ದರ್ಜಿ, ಕವಿತಾ ಮುತ್ತಾಳ ಮಾರ್ಗ-­ದರ್ಶಿ ಶಿಕ್ಷಕ ಮಂಜುನಾಥ ಗ್ರಾಮಪು­ರೋಹಿತ ಅವರನ್ನು ಸನ್ಮಾನಿಸಿ, ವಿಶಿಷ್ಟ ಸಾಧನೆಯನ್ನು ಮನದಾಳದಿಂದ ಕೊಂಡಾಡಿದರು.

ಮುಖ್ಯೋಪಾಧ್ಯಾಯ ಚನ್ನಯ್ಯ ಹಿರೇಮಠ, ಚಂದ್ರಶೇಖರ್‌, ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು. ಶಿಕ್ಷಕಿ ಯಶೋಧಾ ತೋಟಪ್ಪನವರ ಸ್ವಾಗತಿಸಿದರು. ಮಂಜುನಾಥ ಪೂಜಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT