ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜಲನೀತಿ ಅಗತ್ಯ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಕ್ಕಪಕ್ಕದ ರಾಜ್ಯಗಳ ಜೊತೆ ನೀರಿನ ವ್ಯಾಜ್ಯಗಳು ಈ ದೇಶದಲ್ಲಿ ಬಹಳಷ್ಟು ಮುಂದುವರೆಯುತ್ತಿವೆ.

ಇವುಗಳಿಗೆ ಕಾರಣ ನೀರಿನ ಹಂಚಿಕೆಯಲ್ಲಿ ಆಗುತ್ತಿರುವಂತಹ ಲೋಪದೋಷಗಳು. ವಿಶೇಷವಾಗಿ ಕರ್ನಾಟಕಕ್ಕೆ ಕಾವೇರಿ ಮತ್ತು ಕೃಷ್ಣ ನದಿಯ ವಿಚಾರದಲ್ಲಿ ನ್ಯಾಯ ದೊರೆತಿರುವುದಿಲ್ಲ.

ಕರ್ನಾಟಕದ ಅನೇಕ ಯೋಜನೆಗಳಿಗೂ ಸರಿಯಾದಂತಹ ಆಡಳಿತಾತ್ಮಕ ಮಂಜೂರಾತಿ  ದೊರೆತಿರುವುದಿಲ್ಲ.  ಈ ಹಿಂದೆ ಎನ್‌ಡಿಎ ಸರ್ಕಾರದಲ್ಲಿ ನದಿ ಜೋಡಣೆ ಯೋಜನೆಯ ಪ್ರಸ್ತಾಪ ಮುಂದಿಡಲಾಗಿತ್ತು. ಈ ಯೋಜನೆ ಅವಾಸ್ತವಿಕ ಎಂಬ ಕಾರಣದಿಂದ ಇಡೀ ಪ್ರಸ್ತಾಪ ತಿರಸ್ಕೃತವಾಗಿತ್ತು.

ಆದರೆ, ಇಂದಿನ ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಯೋಜನೆ ಈಗ ಪ್ರಸ್ತುತವಾಗಿದೆ.   ಕೇಂದ್ರ ಸರ್ಕಾರ ರಾಷ್ಟ್ರೀಯ ಜಲನೀತಿಯನ್ನು ರೂಪಿಸಿ ಎಲ್ಲಾ ನದಿಗಳನ್ನು ರಾಷ್ಟ್ರೀಕರಣ ಮಾಡುವುದು ಮತ್ತು ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನದಿಗಳ ಜೋಡಿಸುವಂತಹ ಕೆಲಸವನ್ನು ಕೂಡಲೇ ಆರಂಭಿಸಬೇಕು.

ಇಲ್ಲದಿದ್ದರೆ ಅನೇಕ ರಾಜ್ಯಗಳಲ್ಲಿ ನದಿಗಳು ತುಂಬಿ ಹರಿದು ಪ್ರವಾಹ ಬಂದು ಅಪಾಯಗಳು ಸಂಭವಿಸುತ್ತಿದ್ದರೆ ಅಷ್ಟೇ ಪ್ರಮಾಣದಲ್ಲಿ ಅನೇಕ ರಾಜ್ಯಗಳಲ್ಲಿ ಬರಗಾಲ ಆವರಿಸಿ ಜನರ ಬದುಕು ಸಂಕಷ್ಟದಲ್ಲಿರುತ್ತವೆ.

ಈ ನದಿಗಳ ಜೋಡಣೆ ಮತ್ತು ರಾಷ್ಟ್ರೀಯ ಜಲನೀತಿಯಿಂದ ಪರಸ್ಪರ ವ್ಯಾಜ್ಯಗಳು ನಿಲ್ಲುವುದರ ಜೊತೆಗೆ ಪೋಲಾಗುವ ನೀರು ತಪ್ಪಿ ಅವಶ್ಯಕವಿರುವವರಿಗೆ ನೀರು ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT