ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌: ಸೀಮಾ ಕಂಚಿನ ಸಾಧನೆ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಿಜಾಪುರ: ವಿಜಾಪುರ ಕ್ರೀಡಾ ನಿಲಯದ ಸೈಕ್ಲಿಸ್ಟ್‌ ಸೀಮಾ ಆಡಗಲ್‌ ಬುಧವಾರ ಮಣಿಪುರದ ಇಂಫಾಲ್‌ನಲ್ಲಿ ಆರಂಭಗೊಂಡ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದರು. ಈ ಮೂಲಕ ಕೂಟದಲ್ಲಿ ಕರ್ನಾಟಕ ಪದಕಗಳ ಖಾತೆ ತೆರೆಯಿತು.

16 ವರ್ಷದ ಒಳಗಿನ ಬಾಲಕಿಯರ 4 ಕಿ.ಮೀ. ಸ್ಕ್ರ್ಯಾಚ್ ರೇಸ್‌ನಲ್ಲಿ ಸೀಮಾ 7 ನಿಮಿಷ, 25.006 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪಡೆದ ಪಡೆದರು. ಬಾಗಲಕೋಟೆ ಜಿಲ್ಲೆಯ ತುಳಸಿಗೆರೆ ನಿವಾಸಿಯಾಗಿರುವ ಸೀಮಾ ವಿಜಾಪುರದಲ್ಲಿ ಪ್ರಥಮ ಪಿಯು ಓದುತ್ತಿದ್ದಾರೆ. 

ಅರ್ಹತೆ: ಬಾಲಕರ 18 ವರ್ಷದ ಒಳಗಿನವರ ವಿಭಾಗದ 1000 ಮೀಟರ್‌ ಸ್ಪ್ರಿಂಟ್‌ ರೇಸ್‌ನಲ್ಲಿ ಮಾಳಪ್ಪ ಮುರ್ತೆನ್ನವರ  ಮುಂದಿನ ಸುತ್ತಿಗೆ ಅರ್ಹತೆ ಹೊಂದಿದರು. ಟೂರ್ನಿಯು ಇದೇ 8ರವರೆಗೆ ನಡೆಯಲಿದ್ದು, ರಾಜ್ಯದಿಂದ 24 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT