ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್: ಕರ್ನಾಟಕ ತಂಡಗಳಿಗೆ ಗೆಲುವು

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಬಾಲಕ ಹಾಗೂ ಬಾಲಕಿಯರ ತಂಡದವರು ಚತ್ತೀಸಗಡದ ಚಂಪಾದಲ್ಲಿ ನಡೆಯುತ್ತಿರುವ 20ನೇ ಮಿನಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದರು.

ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಬಾಲಕಿಯರ ತಂಡ 25-9, 25-12, 25-17ಪಾಯಿಂಟ್‌ಗಳಿಂದ ಒಡಿಶಾ ತಂಡವನ್ನು ಮಣಿಸಿತು. ಬಾಲಕಿಯರ ತಂಡಕ್ಕೆ ಸಿಕ್ಕ ದ್ವಿತೀಯ ಗೆಲುವು ಇದಾಗಿದೆ. ಮೊದಲ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಸೋಲಿಸಿತ್ತು.

ಬಾಲಕರ ತಂಡಕ್ಕೆ ಜಯ: ಮೊದಲ ಪಂದ್ಯದಲ್ಲಿ ರಾಜಸ್ತಾನದ ಎದುರು ಸೋಲು ಕಂಡಿದ್ದ ಕರ್ನಾಟಕ ಬಾಲಕರ ತಂಡ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ 25-23, 25-23, 25-22ರಲ್ಲಿ ಉತ್ತರಾಖಂಡದ ಎದುರು ಜಯ ಪಡೆಯಿತು. ಈ ಹೋರಾಟ 70 ನಿಮಿಷಗಳ ಕಾಲ ನಡೆಯಿತು. ಆದರೆ ಭಾರಿ ಪೈಪೋಟಿ ಎದುರಾಯಿತು  ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ. ಕರ್ನಾಟಕ ತಂಡ ಸೋಮವಾರ ನಡೆದ ಇನ್ನೊಂದು ಪಂದ್ಯದಲ್ಲಿ 25-22, 25-19, 30-28ಪಾಯಿಂಟ್‌ಗಳಿಂದ ಬಿಹಾರ ತಂಡವನ್ನು ಮಣಿಸಿ ದಿನದ ಎರಡನೇ ಗೆಲುವು ಪಡೆಯಿತು. ಈ ಪಂದ್ಯವು 67 ನಿಮಿಷ ನಡೆಯಿತು.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ತಮಿಳುನಾಡು 25-6, 25-17, 25-11ರಲ್ಲಿ ದೆಹಲಿ ಮೇಲೂ, ಪಶ್ಚಿಮ ಬಂಗಾಳ 25-16, 25-14, 25-13ರಲ್ಲಿ ಜಾರ್ಖಂಡ್ ವಿರುದ್ಧವೂ, ರಾಜಸ್ತಾನ 25-19, 27-25, 17-25, 25-21ರಲ್ಲಿ ಹರಿಯಾಣದ ಮೇಲೂ ಜಯ ಸಾಧಿಸಿತು.

ಬಾಲಕಿಯರ ವಿಭಾಗದಲ್ಲಿ ಮಣಿಪುರ 25-12, 25-7, 25-19ರಲ್ಲಿ ಮಧ್ಯ ಪ್ರದೇಶ ಎದುರು ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT