ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸಂಗೀತ ಸಮಾರಂಭ

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಲಿಯ ಶ್ರೀರಾಮ ನವಮಿ ಸಂಗೀತೋತ್ಸವಕ್ಕೆ 75ರ ಹರೆಯ. ರಾಮನವಮಿ ಎಂದರೆ ಮಂಡಳಿ ಕೋಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಸುವ ಸಂಗೀತ ಸಮಾರೋಹದ ನೆನಪಾಗಿಬಿಡುತ್ತದೆ. ಸ್ಥಳೀಯ ಮತ್ತು ಪರಸ್ಥಳದ ಉದಯೋನ್ಮುಖ ಸಂಗೀತ ಪ್ರತಿಭೆಗಳಿಗೆ ರಾಮನವಮಿ ಸಂಗೀತೋತ್ಸವವು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅದ್ಭುತ ವೇದಿಕೆಯಾದರೆ, ದೇಶ- ವಿದೇಶದಲ್ಲಿ ಹೆಸರು ಮಾಡಿರುವ ವಿದ್ವಾಂಸರ ಹಾಡುಗಾರಿಕೆಯನ್ನು ಸವಿಯುವ ಅವಕಾಶ ಸಂಗೀತರಸಿಕರಿಗೆ! ಹೀಗಾಗಿ ಕೋಟೆ ಮೈದಾನ ಮತ್ತೊಮ್ಮೆ ಸಂಗೀತ ಮಹೋತ್ಸವಕ್ಕೆ ಕ್ಷಣಗಣನೆ ಮಾಡುತ್ತಿದೆ.

ಪ್ರವೇಶ ಪ್ರಕ್ರಿಯೆ
ವಿಜಯನಾಮ ಸಂವತ್ಸರದ ಮೊದಲ ದಿನವಾದ ಯುಗಾದಿಯಂದೇ ರಾಮನವಮಿ ಸಂಗೀತೋತ್ಸವ ಆರಂಭ.  ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಈ ಸಂಗೀತೋತ್ಸವಕ್ಕೆ ಆಯ್ದ ದಿನಗಳಲ್ಲಿ ಮಾತ್ರ ಉಚಿತ ಪ್ರವೇಶವಿರುತ್ತದೆ.

`ಸ್ಥಳೀಯ ಕಲಾವಿದರ ಕಛೇರಿಗಳಿಗೆ ಉಚಿತ ಪ್ರವೇಶ. ಉಳಿದಂತೆ, 36 ದಿನಗಳ ಕಛೇರಿಗೆ ಅನ್ವಯವಾಗುವಂತೆ  ್ಙ 200ರ ಟಿಕೆಟ್ ಕೂಡಾ ಲಭ್ಯ. ಇದು, ಕೋಟೆ ಮೈದಾನದಲ್ಲಿ ತೆರೆದಿರುವ ಪೆಂಡಾಲ್ ಕಚೇರಿಯಲ್ಲಿ ಸಿಗುತ್ತದೆ. ಪರಸ್ಥಳದ ಕಲಾವಿದರ ಕಛೇರಿಯಲ್ಲಿ ಶಿಸ್ತು ಕಾಪಾಡುವ ಮತ್ತು ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಮಂಡಲಿಯ ಕಾರ್ಯದರ್ಶಿ ವರದರಾಜ್ ಅವರು ಹೇಳಿದ್ದಾರೆ.

ಸಂಗೀತೋತ್ಸವಕ್ಕೆ ಚಾಲನೆ
ಸಂಜೆ 4ಕ್ಕೆ ಚಾಂದ್ರಮಾನ ಯುಗಾದಿ  ಆಚರಣೆ, ಕಾಸಿಂ ಮತ್ತು ಬಾಬು ಎಸ್. ಅವರಿಂದ ನಾದಸ್ವರ ವಾದನ. 6ಕ್ಕೆ ಕರ್ನಾಟಕದ ರಾಜ್ಯಪಾಲರಾದ ಎಚ್.ಆರ್. ಭಾರದ್ವಾಜ್ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲರಾದ ಇ.ಎಸ್. ಐ. ನರಸಿಂಹನ್ ಅವರಿಂದ
ಸಂಗೀತೋತ್ಸವಕ್ಕೆ ಚಾಲನೆ. 6.45ಕ್ಕೆ ಯು. ಶ್ರೀನಿವಾಸ್ ಮತ್ತು ಯು. ರಾಜೇಶ್ ಅವರಿಂದ ಮ್ಯಾಂಡೋಲಿನ್ ದ್ವಂದ್ವ ನುಡಿಸಾಣಿಕೆ. ಹಿಮ್ಮೇಳದಲ್ಲಿ: ಎಚ್.ಕೆ. ವೆಂಕಟರಾಂ, ಹರಿಕುಮಾರ್, ಗಿರಿಧರ್ ಉಡುಪ ಮತ್ತು ಗುರುಪ್ರಸನ್ನ.

ಶುಕ್ರವಾರದ ಕಛೇರಿ
ಎರಡನೇ ದಿನವಾದ ಶುಕ್ರವಾರ ಸಂಜೆ 6.30ರಿಂದ 9.30ರವರೆಗೆ ಹೈದರಾಬಾದ್ ಸಹೋದರರಾದ ರಾಘವಾಚಾರಿ ಮತ್ತು ಶೇಷಾಚಾರಿ ಅವರ ಗಾಯನ. ಪಕ್ಕವಾದ್ಯ ಸಹಕಾರ: ಎಚ್.ಎನ್. ಭಾಸ್ಕರ್, ಮನ್ನಾರ್‌ಗುಡಿ ಈಶ್ವರನ್ ಮತ್ತು ಅಮೃತ್ ಎನ್.
ಮೇ ಐದರವರೆಗೂ ಪ್ರತಿದಿನ ಸಂಜೆ 5.15ರಿಂದ 6.15ರವರೆಗೆ ಹಾಗೂ ಸಂಜೆ 6.30ರಿಂದ ರಾತ್ರಿ 9.30ರವರೆಗೂ ಕಛೇರಿಗಳಿರುತ್ತವೆ.

ಎಂದಿನಂತೆ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಏ.28ರಂದು ಮಂಡಳಿಯ ಸಂಸ್ಥಾಪಕರ ದಿನಾಚರಣೆ ಹಾಗೂ ಎಂಟು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿರುತ್ತದೆ. ಕಾರ್ಯಕ್ರಮದ ಬಗ್ಗೆ ಮತ್ತು ವೇಳಾಪಟ್ಟಿ ಬಗ್ಗೆ ಮಾಹಿತಿಗೆ ಸಂಪರ್ಕಿಸಿ; 94480 79079/99649 50778.

ಉಪನ್ಯಾಸ ಸರಣಿ
ಈ ರಾಷ್ಟ್ರೀಯ ಸಂಗೀತೋತ್ಸವದುದ್ದಕ್ಕೂ ಪ್ರತಿದಿನ ಬೆಳಿಗ್ಗೆ 8ರಿಂದ 9.30ರವರೆಗೆ ನಡೆಯುವ ಆಧ್ಯಾತ್ಮಿಕ ಉಪನ್ಯಾಸಗಳಿರುತ್ತವೆ. ಪ್ರವೇಶ ಉಚಿತ. ಏ. 12ರಿಂದ ಏ.14ರವರೆಗೆ ಪಂಡಿತ ಮಧ್ವಾಚಾರ್ಯ ಮೊಕಾಶಿ ಅವರಿಂದ ಉಪನ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT