ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹಾಕಿ ಲೀಗ್: ಅಗ್ರಸ್ಥಾನದಲ್ಲಿ ಒಎನ್‌ಜಿಸಿ ತಂಡ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಿಂದಲೇ ಗೋಲು ಕಲೆ ಹಾಕಿದ ಒಎನ್‌ಜಿಸಿ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3-2 ಗೋಲುಗಳಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎದುರು ಗೆಲುವು ಸಾಧಿಸಿತು. ಇದರಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

  ಆಡಿರುವ ಆರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಒಎನ್‌ಜಿಸಿ ಒಟ್ಟು 18 ಪಾಯಿಂಟ್ಸ್ ಗಳಿಸಿದೆ. ಐಒಸಿಎಲ್ 16 ಪಾಯಿಂಟ್ಸ್ (ಐದು ಗೆಲುವು, ಒಂದು ಡ್ರಾ) ಹಾಗೂ ಏರ್ ಇಂಡಿಯಾ 15 ಪಾಯಿಂಟ್ಸ್ (5 ಗೆಲುವು ಹಾಗೂ 1 ಸೋಲು) ಗಳಿಸಿವೆ.

ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಎನ್‌ಜಿಸಿಯ ಮನ್‌ದೀಪ್ ಸಿಂಗ್ 30ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ದಿವಾಕರ್ ರಾಮ್ 45 ಹಾಗೂ 49ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಫೋರ್ಟಿಸ್ 5-3 ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) `ಎ~ ಎದುರು ಜಯ ಪಡೆಯಿತು.

ವಿಜಯಿ ತಂಡದ ಶಶಿ ಟೋಪ್ನೊ (19ನೇ ನಿ.), ಇನೊಸೆಂಟ್ ಕುಲ್ಲು (24ನೇ ನಿ.), ವಿಕ್ರಮಜಿತ್ ಸಿಂಗ್ (49 ಹಾಗೂ 54ನೇ ನಿ.) ಮತ್ತು ದಲೇರ್ (57ನೇ ನಿ.) ಗೋಲು ಕಲೆ ಹಾಕಿದರು.

 ಎಂಇಜಿ ತಂಡದ ದಯಾಳ್ (30ನೇ ನಿ.), ಬಿ.ಯು. ಬೋಪಣ್ಣ (42ನೇ ನಿ.) ಹಾಗೂ ಪೃಥ್ವಿ ಶೆಟ್ಟಿ (58ನೇ ನಿ.) ಗೋಲು ಗಳಿಸಿ ಗಮನ ಸೆಳೆದರು.

ಶುಕ್ರವಾರದ ಪಂದ್ಯಗಳು: ಎಸ್‌ಎಐ `ಎ~-ಎಂಇಜಿ (ಸಂಜೆ 5.30ಕ್ಕೆ), ಬಿಪಿಸಿಎಲ್-ಒಎನ್‌ಜಿಸಿ (ರಾತ್ರಿ 7.00ಗಂಟೆಗೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT