ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಅಸ್ತ್ರ: ವಿಶ್ವಸಂಸ್ಥೆ ವರದಿ ತಳ್ಳಿಹಾಕಿದ ಬಷರ್‌

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಪಿ): ಪ್ರತಿಭಟನಾ ನಿರತ ನಾಗರಿಕರ ಮೇಲೆ ಸಿರಿಯಾ ಸರ್ಕಾರ ರಾಸಾಯನಿಕ ಅಸ್ತ್ರ ಪ್ರಯೋ­ಗಿಸಿ­ರು­ವುದು ನಿಜ ಎಂಬ  ವಿಶ್ವಸಂಸ್ಥೆಯ ವರದಿ­ಯನ್ನು ಅಧ್ಯಕ್ಷ ಬಷರ್‌ ಅಲ್‌ ಅಸಾದ್ ‘ಅವಾ­ಸ್ತವಿಕ’ ಎಂದು ತಳ್ಳಿ ಹಾಕಿದ್ದಾರೆ.

ಇದು ಭಯೋತ್ಪಾದಕ ಕೃತ್ಯ ಎಂಬು­ವುದಕ್ಕೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ. ಭಯೋತ್ಪಾ­ದಕರ ಗುಂಪು ಆಗಸ್ಟ್‌ 21ರಂದು ಬೇರೆ ಪ್ರದೇಶದಿಂದ ಕ್ಷಿಪಣಿ ಪ್ರಯೋ­ಗಿಸಿ, ನಾಗರಿಕರ ಮೇಲೆ  ಸರಿನ್‌ ವಿಷಾ­ನಿಲ ಬಳಸಿದ ಕೃತ್ಯವನ್ನು ರಷ್ಯಾದ ಉಪಗ್ರಹ ಸೆರೆ ಹಿಡಿದಿದೆ ಎಂದು ಅಸಾದ್‌ ಹೇಳಿದರು. 

ಇಲ್ಲಿಯ ಖಾಸಗಿ ಸುದ್ದಿ ವಾಹಿನಿ­ಯೊಂದಕ್ಕೆ ಡಮಾಸ್ಕಸ್‌ನಲ್ಲಿ ಬಷರ್‌ ನೀಡಿದ ಸಂದರ್ಶನವನ್ನು ಬುಧ­ವಾರ ಪ್ರಸಾರ ಮಾಡ­ಲಾ­ಯಿತು. ‘ಅಮೆ­ರಿಕ, ಬ್ರಿಟನ್‌ ಮತ್ತು ಫ್ರಾನ್ಸ್‌ ಸೇರಿ­ಕೊಂಡು ಇದನ್ನು ನನ್ನ ತಲೆಗೆ ಕಟ್ಟಿ­ದರು. ಇದಕ್ಕೂ ನನಗೂ  ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಿರಿಯಾ ಸಂಗ್ರಹಗಾರದಲ್ಲಿರುವ ರಾಸಾಯನಿಕ ಅಸ್ತ್ರಗಳನ್ನು ನಾಶ ಮಾಡುವ ಕುರಿತಂತೆ ಅಮೆರಿಕ ಮತ್ತು ರಷ್ಯಾದ ನಡುವೆ ನಡೆದ ಒಪ್ಪಂದವನ್ನು ಅಕ್ಷರಶಃ ಪಾಲಿಸಲು ನಾನು ಬದ್ಧ. ಅಸ್ತ್ರಗಳ ನಾಶಕ್ಕೆ ಒಂದು ವರ್ಷ ಕಾಲಾವಕಾಶ ಬೇಕಾಗುವುದು ಜೊತೆಗೆ 6700 ಕೋಟಿ ರೂಪಾಯಿ ವೆಚ್ಚ ತಗಲುತ್ತದೆ’ ಎಂದು ಬಷರ್‌ ತಿಳಿಸಿದರು.

ರಾಸಾಯನಿಕ ಅಸ್ತ್ರಗಳ ನಾಶದ ಸಂದಭರ್ದಲ್ಲಿ ಎದುರಾಗುವ ತಾಂತ್ರಿಕ ಅಡಚಣೆಗಳ ಬಗ್ಗೆ ಈಗಾಗಲೇ ತಜ್ಞರ ಜೊತೆ ಚರ್ಚಿಸಲಾಗಿದೆ. ಇದು ತೀರಾ ಸೂಕ್ಷ್ಮ ಮತ್ತು ಅಪಾಯಕಾರಿ ಕೆಲಸ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಸಿರಿಯಾ ಬಳಿ ಇರುವ ಅಸ್ತ್ರಗಳ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸಿದ್ಧ. ತಜ್ಞರನ್ನು ಶಸ್ತಾಸ್ತ್ರ ಸಂಗ್ರಹಗಾರಗಳಿಗೆ ಕಳುಹಿಸಿ ಪರೀಕ್ಷಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ಬಷರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT