ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ವರ್ತನೆಗೆ ಕಟು ಟೀಕೆ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಮೇಥಿ (ಪಿಟಿಐ): ಎದುರಾಳಿಗಳ ಚುನಾವಣಾ ಆಶ್ವಾಸನೆಯ ಪಟ್ಟಿಯನ್ನೊಳಗೊಂಡ ಕಾಗದವನ್ನು ಹರಿದು ಹಾಕಿದ ರಾಹುಲ್ ಗಾಂಧಿ ಅವರ ವರ್ತನೆಗೆ ಕಟು ಟೀಕೆಗಳು ವ್ಯಕ್ತವಾಗಿವೆ. ಲಖನೌದಲ್ಲಿ ಬುಧವಾರ ಚುನಾವಣಾ ಸಭೆಯಲ್ಲಿ ಈ ಘಟನೆ ನಡೆದಿತ್ತು.

`ರಾಹುಲ್ ಸಿಟ್ಟಿನಲ್ಲಿ ವೇದಿಕೆಯಿಂದ ಜಿಗಿದರೂ ಅಚ್ಚರಿಯಿಲ್ಲ~ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಲೇವಡಿ ಮಾಡಿದರೆ,  `ರಾಹುಲ್ ತಮ್ಮ ಕೋಪವನ್ನು ನಿಗ್ರಹಿಸಿಕೊಳ್ಳಬೇಕು. ಸಿಟ್ಟು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ~ ಎಂದು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಿತವಚನ ನುಡಿದಿದ್ದಾರೆ.

`ಇದೊಂದು ತಮಾಷೆ. ಇದರಿಂದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲಾಗದು~ ಎಂದು ಬಿಜೆಪಿ ಟೀಕಿಸಿದೆ. ಈ ನಡುವೆ ಕಾಂಗ್ರೆಸ್, ರಾಹುಲ್ ಅವರನ್ನು ಸಮರ್ಥಿಸಿಕೊಂಡಿದೆ.

`ಚುನಾವಣೆ ಬಳಿಕ ಆಶ್ವಾಸನೆಗಳನ್ನು ಮರೆಯದೇ ಈಡೇರಿಸಬೇಕು~ ಎನ್ನುವ ಸಂದೇಶ ರಾಹುಲ್ ವರ್ತನೆಯ ಹಿಂದೆ ಅಡಗಿದೆ~ ಎಂದು ಪಕ್ಷವು  ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT