ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ವೇಗದ ಓಟಗಾರ

Last Updated 13 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಗೇಡ್ ಶಾಲೆಯ ರಾಹುಲ್ ರೆಜಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ 23ನೇ ವಾರ್ಷಿಕ ಎರಡನೇ ವಾರಾಂತ್ಯ ಅಥ್ಲೆಟಿಕ್ ಕೂಟದ 13 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ 100 ಮೀ. ಓಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರು.

ಅವಳಿ ಸಹೋದರರಾದ ಸೇಂಟ್ ಮೇರಿಸ್ ಬಾಲಕರ ಇಂಗ್ಲೀಷ್ ಶಾಲೆಯ ಎಲ್.ಎಸ್.ಹರಿ ಲಕ್ಷ್ಮಣ್ ಹಾಗೂ ಎಲ್.ಎಸ್.ಹರಿರಾಮ್ 3000 ಮೀ.ನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಾರಾಂತ್ಯ ಅಥ್ಲೆಟಿಕ್ ಕೂಟದ ಬಾಲಕರ ವಿಭಾಗದ ಫಲಿತಾಂಶಗಳು ಇಂತಿವೆ.

13 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ರಾಹುಲ್ ರೆಜಿ (ಬ್ರಿಗೇಡ್ ಶಾಲೆ)-1, ಕೆ.ಆರ್. ಶ್ರೇಯಸ್ ಆಚಾರ್ಯ (ಬ್ರಿಗೇಡ್ ಶಾಲೆ)-2, ಎಸ್.ಮಯಾಂಕ್ (ವಿದ್ಯಾನಿಕೇತನ ಶಾಲೆ)-3, ಕಾಲ: 13.9 ಸೆ.; 800 ಮೀ. ಓಟ: ನಿಖಿತ್ ಲಕ್ಷ್ಮಣ್ (ಎಬೆನೈಜರ್ ಇಂಟರ್‌ನ್ಯಾಷನಲ್ ಶಾಲೆ)-1, ಎಲ್.ಎಸ್. ಹರಿಕೃಷ್ಣ (ಸೇಂಟ್ ಜೋಸೆಫ್ ಇಂಡಿಯನ್ ಮಿಡ್ಲ್‌ಸ್ಕೂಲ್)-2, ಎಸ್. ಶ್ರೀನಿವಾಸ್ (ಶೇಷಾದ್ರಿಪುರ ಇಂಗ್ಲೀಷ್ ಶಾಲೆ)-3, ಕಾಲ: 2:20.5.; 3000 ಮೀ. ಓಟ: ಎಲ್.ಎಸ್.ಹರಿ ಲಕ್ಷ್ಮಣ (ಸೇಂಟ್ ಮೇರಿಸ್ ಬಾಲಕರ ಇಂಗ್ಲೀಷ್ ಶಾಲೆ)-1, ಎಲ್.ಎಸ್. ಹರಿರಾಮ (ಸೇಂಟ್ ಮೇರಿಸ್ ಬಾಲಕರ ಇಂಗ್ಲೀಷ್ ಶಾಲೆ)-2, ಎಂ.ರಾಹುಲ್ (ಶೇಷಾದ್ರಿಪುರ ಇಂಗ್ಲಿಷ್ ಹೈಯರಿ ಪ್ರೈಮರಿ ಶಾಲೆ)-3, ಕಾಲ: 13:27.3.; 80 ಮೀ. ಹರ್ಡಲ್ಸ್: ರಿಶಿ ಕುಮಾರ್ (ನ್ಯಾಷನಲ್ ಪಬ್ಲಿಕ್ ಶಾಲೆ)-1, ಎಸ್. ಸಿದ್ದಾರ್ಥ್ (ನ್ಯಾಷನಲ್ ಪಬ್ಲಿಕ್ ಶಾಲೆ)-2, ಇಸ್ಮಾಯಿಲ್ ಅಹ್ಮದ್ (ಸೇಂಟ್ ಮೇರಿಸ್ ಪಬ್ಲಿಕ್ ಶಾಲೆ)-3, ಕಾಲ: 15.7 ಸೆ.; ಲಾಂಗ್‌ಜಂಪ್: ಭಗವಾಂಕೃಪ ಮೆಹ್ತಾ (ವಿದ್ಯಾನಿಕೇತನ ಶಾಲೆ)-1, ಕೆ.ಆರ್. ಶ್ರೇಯಸ್ ಆಚಾರ್ಯ (ಬ್ರಿಗೇಡ್ ಶಾಲೆ)-2, ಎಸ್. ಚೈತನ್ಯ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-3, ದೂರ: 4.26 ಮೀ.;
ಟ್ರಿಪಲ್ ಜಂಪ್: ಆರ್.ಯಜತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-1,ಆರ್ಯನ್ ಮೊಯಿನ್ (ವಿದ್ಯಾನಿಕೇತನ ಶಾಲೆ)-2, ದಿಶಾಂಕ್ (ಎಸ್. ಕದಂಬಿ ವಿದ್ಯಾಕೇಂದ್ರ)-3, ದೂರ: 8.35 ಮೀ.; ಹೈಜಂಪ್: ಸಾಯಿನಾಥನ್ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-1, ಅನಿಶ್ ಕೊಟೇಚಾ (ವಿದ್ಯಾನಿಕೇತನ ಶಾಲೆ)-2, ಎಸ್. ಚೈತನ್ಯ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-3, ಎತ್ತರ: 1.27 ಮೀ.; ಷಾಟ್‌ಪಟ್: ಹೃದಯ ಪಟೇಲ್ (ವಿದ್ಯಾನಿಕೇತನ)-1, ಆರ್.ರೋಹಿತ್ (ಕಾರ್ಮೆಲ್ ಹೈಸ್ಕೂಲ್)-2, ಎಸ್.ಮೊನಿಷ್ ನಾರಾಯಣ್ (ಕಾರ್ಮೆಲ್ ಹೈಸ್ಕೂಲ್)-3, ದೂರ: 8.40ಮೀ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT