ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಕಿ ಪಾಂಟಿಂಗ್ ಟಿವಿ ಸೆಟ್ ಒಡೆದ ಪ್ರಕರಣ: ಐಸಿಸಿಗೆ ದೂರು ರವಾನಿಸಿದ ಬಿಸಿಸಿಐ

Last Updated 23 ಫೆಬ್ರುವರಿ 2011, 18:35 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆಟಗಾರರ ಡ್ರೆಸ್ಸಿಂಗ್ ಕೊಠಡಿಯಲ್ಲಿ ಟಿವಿ ಸೆಟ್ ಒಡೆದ ಆಪಾದನೆಗೆ ಗುರಿಯಾಗಿರುವ ಆಸ್ಟ್ರೇಲಿಯಾ  ತಂಡದ ನಾಯಕ ರಿಕಿ ಪಾಂಟಿಂಗ್ ಐಸಿಸಿ ಆಟಗಾರರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗುವ ಸಾಧ್ಯತೆಯಿದೆ.

ಜಿಂಬಾಬ್ವೆ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಕೇವಲ 28 ರನ್‌ಗಳಿಗೆ ರನ್ ಔಟ್ ಆಗಿದ್ದರಿಂದ ಬೇಸರಗೊಂಡ ಪಾಂಟಿಂಗ್ ತಮ್ಮ ಡ್ರೆಸ್ಸಿಂಗ್ ಕೊಠಡಿಯಲ್ಲಿದ್ದ ಟಿವಿ ಸೆಟ್‌ನ್ನು ಒಡೆದು ಹಾಕಿದ್ದರು. ಈ ಕುರಿತು ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೂರು ನೀಡುವುದಾಗಿ ಮಂಗಳವಾರ ಹೇಳಿತ್ತು. ಈಗ ದೂರು ನೀಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ದೂರನ್ನು ಐಸಿಸಿಗೆ ರವಾನೆ ಮಾಡಿದೆ.

‘ಟಿವಿ ಸೆಟ್ ಒಡೆದ ಘಟನೆಗೆ ಸಂಬಂಧಿಸಿದಂತೆ ಬಿಸಿಸಿಐ ಬುಧವಾರ ನೀಡಿರುವ ದೂರನ್ನು ಸ್ವೀಕರಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಐಸಿಸಿಯ ವಕ್ತಾರ ಕೊಲಿನ್ ಗಿಬ್ಸೋನ್ ತಿಳಿಸಿದ್ದಾರೆ. ‘ಅಷ್ಟೇಅಲ್ಲದೇ ರಿಕಿ ಪಾಂಟಿಂಗ್ ಅವರ ವರ್ತನೆ ಐಸಿಸಿ ಆಟಗಾರರ ನೀತಿ ಸಂಹಿತೆ ಉಲ್ಲಂಘನೆ ಅಡಿ ಬರುವ ಸಾಧ್ಯತೆ ಹೆಚ್ಚಿದೆ’ ಎನ್ನುವ ಅಂಶವನ್ನು ಗಿಬ್ಸೋನ್ ಹೇಳಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪಾಂಟಿಂಗ್ ಕ್ಷಮೆಯಾಚಿಸಿದ್ದಾರೆ. ಆದರೂ ಬಿಸಿಸಿಐಗೆ ಗುಜರಾತ್ ಕ್ರಿಕೆಟ್ ಸಂಸ್ಥೆ ದೂರು ನೀಡಿದೆ. ಟಿವಿ ಸೆಟ್ 35,000 ರೂಪಾಯಿ ಮೌಲ್ಯವನ್ನು ಹೊಂದಿದೆ’ ಎನ್ನುವ ಅಂಶವನ್ನು ಜಿಸಿಎನ ಕಾರ್ಯದರ್ಶಿ ರಾಜೇಶ್ ಪಟೇಲ್ ತಿಳಿಸಿದ್ದಾರೆ. ಆದ್ದರಿಂದ ಪಂದ್ಯದ ಇಂತಿಷ್ಟು ಹಣವನ್ನು ದಂಡದ ರೂಪದಲ್ಲಿ ತೆತ್ತಬೇಕಾದ ಸ್ಥಿತಿಯೂ ಪಾಂಟಿಂಗ್ ಅವರಿಗೆ ಎದುರಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT