ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪ್ಪನ್‌ ಆತ್ಮಹತ್ಯೆ: ವರದಿ ಸಲ್ಲಿಕೆ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ರಿಪ್ಪನ್‌ ಮಲ್ಹೋತ್ರಾ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಸಿಐಡಿ ಡಿಜಿಪಿ ಬಿಪಿನ್‌ ಗೋಪಾಲಕೃಷ್ಣ ಅವರಿಗೆ ಮಂಗಳ­ವಾರ ವರದಿ ಸಲ್ಲಿಸಿದ್ದಾರೆ.

‘ಹಿಂದಿನ ನಗರ ಪೊಲೀಸ್‌ ಕಮಿಷನರ್‌ ಜ್ಯೋತಿಪ್ರಕಾಶ್ ಮಿರ್ಜಿ ಹಾಗೂ ಸಿಸಿಬಿ ಡಿಸಿಪಿ ದೇವರಾಜ್‌ ಅವರು ಏಳು ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿ­ದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ರಿಪ್ಪನ್‌ ಜೂ.29ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಇದೀಗ ತನಿಖಾಧಿಕಾರಿಗಳು ಸಲ್ಲಿಸಿ­ರುವ ವರದಿಯಲ್ಲಿ ‘ಅಧಿಕಾರಿಗಳು ಹಣ ನೀಡುವಂತೆ ಕಿರುಕುಳ ನೀಡಿರು­ವುದಕ್ಕೆ ಯಾವುದೇ ದಾಖಲೆಗಳಿಲ್ಲ’ ಎಂದು ಹೇಳಿದ್ದಾರೆ.

‘ಪ್ರಕರಣ ಸಂಬಂಧ ರಿಪ್ಪನ್‌ ಸ್ನೇಹಿತರು, ಸಂಬಂಧಿಕರು, ಜ್ಯೋತಿ ಪ್ರಕಾಶ ಮಿರ್ಜಿ, ದೇವರಾಜ್‌ ಹಾಗೂ ಸಿಸಿಬಿಯ ಕೆಲ ಸಿಬ್ಬಂದಿಯನ್ನು ವಿಚಾ­ರಣೆ ನಡೆಸಿ ಮಾಹಿತಿ ಕಲೆ ಹಾಕಲಾ­ಗಿದೆ. ಅಲ್ಲದೇ, ರಿಪ್ಪನ್‌ ಮೊಬೈಲ್‌ಗೆ ಬಂದು ಹೋಗಿರುವ ಕರೆಗಳ ಬಗ್ಗೆ ಪರಿಶೀಲನೆ ನಡೆ­ದಿದ್ದು, ಅಧಿ­­ಕಾರಿಗಳು ರಿಪ್ಪನ್‌ ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ ಎಂಬುದು ಈವರೆಗಿನ ತನಿಖೆಯಿಂದ ಸಾಬೀತಾಗಿದೆ’ ಎಂದು ವರದಿಯಲ್ಲಿದೆ.

‘ರಿಪ್ಪನ್‌ ಆತ್ಮಹತ್ಯೆ ಮಾಡಿಕೊಳ್ಳು­ವು­ದಕ್ಕೂ 2 ದಿನಗಳ ಹಿಂದೆ (ಜೂ 27) ಪ್ರಕರಣವೊಂದರ ವಿಚಾರಣೆ­ಗಾಗಿ ಸಿಸಿಬಿ ಕಚೇರಿಗೆ ಬಂದು ಹೋಗಿದ್ದಾರೆ. ಆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಅವರು ಈವರೆಗೆ ಮಿರ್ಜಿ ಅವರನ್ನಾಗಲೀ ಹಾಗೂ ದೇವರಾಜ್‌ ಅವರನ್ನಾಗಲೀ ಭೇಟಿಯಾಗಿರುವುದಕ್ಕೆ ಸಾಕ್ಷಿಗಳಿಲ್ಲ. ಈ ವರದಿಯನ್ನು ಡಿಜಿಪಿ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT