ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ಇಳಿಮುಖ: ಬೆಂಗಳೂರು ಮಾರುಕಟ್ಟೆ ಸ್ಥಿರ:ಆರ್ಥಿಕ ಅಸ್ಥಿರತೆ: ಗೃಹ ಮಾರಾಟ ಇಳಿಕೆ

Last Updated 15 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರ್ಥಿಕ ಅಸ್ಥಿರತೆ ಮತ್ತು ಬಡ್ಡಿ ದರ ಏರಿಕೆಯಿಂದ ಗೃಹ ಮತ್ತು ನಿವೇಶನ ಮಾರಾಟ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕ ಅವಧಿಯಲ್ಲಿ ಶೇ 50ರಷ್ಟು ಇಳಿಕೆ ಕಂಡಿದೆ ಎಂಬುದು `ಪ್ರಾಪ್ ಈಕ್ವಿಟಿ~ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಮುಂಬೈ ಅಗ್ಗ:ಬೇಡಿಕೆ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಅಹಮದಾಬಾದ್, ಮುಂಬೈ ಸೇರಿದಂತೆ ಪ್ರಮುಖ ಮಹಾ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಗೃಹ, ನಿವೇಶನ ದರವನ್ನು ಶೇ 20ರಷ್ಟು ತಗ್ಗಿಸಿದ್ದಾರೆ. ಮುಂಬೈನಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಗರಿಷ್ಠ ಮಟ್ಟದಲ್ಲಿ ಶೇ 58ರಷ್ಟು ಕುಸಿದಿದೆ. ದೆಹಲಿಯಲ್ಲಿ ಶೇ 57 ರಷ್ಟು ತಗ್ಗಿದೆ.

ಬೆಂಗಳೂರು ಸ್ಥಿರ: ದೇಶದ ಮೂರನೆಯ ಅತಿ ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾದ ಬೆಂಗಳೂರಿನಲ್ಲಿ ಗೃಹ, ನಿವೇಶನ ಖರೀದಿ ಶೇ 18ರಷ್ಟು ತಗ್ಗಿದೆ. ಆದರೆ, ದಹಲಿ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಮಾರುಕಟ್ಟೆ  ಬಹುತೇಕ ಸ್ಥಿರವಾಗಿದೆ ಎಂದು ಈ ಅಧ್ಯಯನ ಹೇಳಿದೆ.

ದೇಶದ ಆರ್ಥಿಕ ವೃದ್ಧಿ ದರ ಕುಸಿದಿರುವುದು, ಹಣದುಬ್ಬರ, ಬ್ಯಾಂಕ್ ಬಡ್ಡಿ ದರ ಹೆಚ್ಚಳ ಇತ್ಯಾದಿ ಕಾರಣಗಳು ರಿಯಲ್ ಎಸ್ಟೇಟ್ ವಲಯದ ಹಿನ್ನಡೆಗೆ ಪ್ರಮುಖ ಕಾರಣ ಎಂದು ಪ್ರಾಪ್ ಈಕ್ವಿಟಿ `ಸಿಇಒ~ ಸಮೀರ್ ಜಸುಜಾ ಅಭಿಪ್ರಾಯಪಟ್ಟಿದ್ದಾರೆ.

2011-12ನೇ ಹಣಕಾಸು ವರ್ಷದ  ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಮಹಾ ನಗರಗಳಲ್ಲಿ ಒಟ್ಟು 35,420 ಗೃಹಗಳು ಮಾರಾಟವಾಗಿದ್ದವು. ಪ್ರಸಕ್ತ ಅವಧಿಯಲ್ಲಿ 15,104ಕ್ಕೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT