ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕಡಿವಾಣ ಹಾಕಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಸಂಸ್ಥೆಯ ರಿಯಲ್ ಎಸ್ಟೇಟ್ ಅವ್ಯವಹಾರವನ್ನು ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಬಯಲಿಗೆಳೆದಿರುವುದು ಪ್ರಶಂಸನೀಯ. ಸರ್ಕಾರ ಈ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸುವುದರ ಜೊತೆಯಲ್ಲಿ ದೇಶದಲ್ಲಿ ಲಂಗುಲಗಾಮಿಲ್ಲದೆ ಸಾಗುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕಡಿವಾಣ ಹಾಕುವತ್ತ ಚಿಂತಿಸುವುದು ಒಳ್ಳೆಯದು.

ಕೃಷಿ ಭೂಮಿಯನ್ನು ಗೃಹಬಳಕೆಗೆ ಪರಿವರ್ತಿಸುವಿಕೆಗೆ ಯಾವುದೇ ವೈಜ್ಞಾನಿಕ ಮಾನದಂಡವಿಲ್ಲ. ಯಾರು ಬೇಕಾದರೂ ಎಷ್ಟು ಎಕರೆಯನ್ನಾದರೂ ಪರಿವರ್ತಿಸುವ ಪ್ರವೃತ್ತಿ ಬೆಳೆಯುತ್ತಿದೆ. ಭೂ ಪರಿವರ್ತನೆಯ ಸರ್ಕಾರದ ನೀತಿಗಳನ್ನೆಲ್ಲಾ ಗಾಳಿಗೆ ತೂರಲಾಗುತ್ತದೆ. ರಾಜಕಾರಣಿಗಳ ಜತೆ ಅಧಿಕಾರಿಗಳು ಹಾಗೂ ಉದ್ದಿಮೆದಾರರು ಶಾಮೀಲಾಗಿ ಅಕ್ರಮ ಭೂದಂಧೆನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT