ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ನಿಂದ ಚಿನ್ನದ ಉಡುಗೊರೆ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ರಿಲಯನ್ಸ್ ಜ್ಯುವೆಲ್ಸ್ ಈ ಬಾರಿಯ ವರ ಮಹಾಲಕ್ಷ್ಮಿ ಪ್ರಯುಕ್ತ ವಿಶೇಷ ಉಡುಗೊರೆ ಯೋಜನೆಯನ್ನು ಪ್ರಕಟಿಸಿದೆ.

ಚಿನ್ನ ಮತ್ತು ವಜ್ರದ ಆಭರಣಗಳು ಅತಿ ಕಡಿಮೆ ತಯಾರಿಕಾ ಶುಲ್ಕದಲ್ಲಿ ಲಭ್ಯವಾಗಲಿವೆ. ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭ ನಿತ್ಯ ಬಳಕೆಯ ಬಳೆಗಳು, ಚಿನ್ನದ ಸರಗಳು ಯಂತ್ರ ನಿರ್ಮಿತ ಆಭರಣಗಳು ಕೇವಲ 99/ಗ್ರಾಂ ಮತ್ತು ಕೋಲ್ಕೊತ್ತಾ ಫಿಲಿಗ್ರೀಗೆ 199/ಗ್ರಾಮ್‌ಗೆ ದೊರೆಯಲಿದೆ. ಇದರೊಂದಿಗೆ ಇತರ ಎಲ್ಲ ವಜ್ರದ ಆಭರಣಗಳ ಮೇಲೆ 9/ಗ್ರಾಮ್ ತಯಾರಿಕಾ ಶುಲ್ಕ ಇರುತ್ತದೆ.  ಈ ವಿಶೇಷ ಕೊಡುಗೆ ಜುಲೈ 27ರವರೆಗೆ ಲಭ್ಯವಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್‌ನ  ಹಿರಿಯ ಉಪಾಧ್ಯಕ್ಷ ಮತ್ತು ಬಿಸಿನೆಸ್ ಮುಖ್ಯಸ್ಥ ಅಶೋಕ್ ಕೌಲ್, `ರಿಲಯನ್ಸ್ ಜ್ಯುವೆಲ್ಸ್ ಸದಾ ಗ್ರಾಹಕರ ಲಾಭವನ್ನು ಹೆಚ್ಚಿಸಲು ಉತ್ಸುಕತೆ ತೋರುತ್ತದೆ. ವರಮಹಾಲಕ್ಷ್ಮಿ ಪ್ರಯುಕ್ತ ಆಭರಣಗಳ ಮೇಲಿನ ತಯಾರಿಕಾ ಶುಲ್ಕವನ್ನು ಇಳಿಸಿರುವುದರಿಂದ ಚಿನ್ನ, ವಜ್ರಾಭರಣಗಳ ಹೆಚ್ಚಿನ ಖರೀದಿ ಮಾಡಿ ಲಕ್ಷ್ಮಿಯನ್ನು ಮನೆಗೊಯ್ಯಬಹುದು~ ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT