ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿಗೆ ಆಗ್ರಹ: ಅಣಕು ಶವ ಮೆರವಣಿಗೆ

Last Updated 4 ಮೇ 2012, 9:40 IST
ಅಕ್ಷರ ಗಾತ್ರ

ಧಾರವಾಡ: ಕಳೆದ 25 ವರ್ಷಗಳಿಂದ ನಗರದ ಸಪ್ತಾಪುರ ಹಾಗೂ ಶ್ರೀನಗರ ಭಾಗದಲ್ಲಿ ರುದ್ರಭೂಮಿ ಇಲ್ಲದಿರುವುದರಿಂದ ಯಾರಾದರೂ ತೀರಿಕೊಂಡರೆ ಸುಮಾರು ಏಳು ಕಿ.ಮೀ. ದೂರದ ಹೊಸಯಲ್ಲಾ ಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡ ಬೇಕಾಗಿದೆ.
 
ಆದ್ದರಿಂದ ಕೂಡಲೇ ಸಪ್ತಾಪುರದಲ್ಲಿ ರುದ್ರಭೂಮಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರುದ್ರಭೂಮಿ ಸೇವಾ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ಅಣಕು ಶವಯಾತ್ರೆ ನಡೆಸಿದರು.ಮೆರವಣಿಗೆಯು ಶ್ರೀನಗರದಿಂದ ಆರಂಭವಾಗಿ ಜಯನಗರ ಕ್ರಾಸ್, ಸಪ್ತಾಪುರ, ಸುಳ್ಳದಮಠ ಕಾಂಪೌಂಡ್, ಹಿಂದಿ ಪ್ರಚಾರ ಸಭಾ ಮೂಲಕ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಸದಸ್ಯ ಬಿ.ಆರ್.ದೇಶಪಾಂಡೆ , `ಸಾಕಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಸಪ್ತಾಪುರ, ಶ್ರೀನಗರ ಹಾಗೂ ಜಯನಗರ ಭಾಗಗಳಲ್ಲಿ ಸಾಕಷ್ಟು ಮನೆಗಳಾಗಿದ್ದು, ಇಲ್ಲಿನ ನಿವಾಸಿಗಳು ತೀರಿಕೊಂಡರೆ ಸಾಕಷ್ಟು ದೂರ ಇರುವ ಹೊಸಯಲ್ಲಾಪುರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಬೇಕು.

ಇದರಿಂದ ಸಾಕಷ್ಟು ತೊಂದರೆಯಾಗಿದ್ದು, ಕೂಡಲೇ ರುದ್ರಭೂಮಿಯನ್ನು ಮಂಜೂರು ಮಾಡಬೇಕು~ ಎಂದು ಹೇಳಿದರು.ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, `ಈ ಬಗ್ಗೆ ಪರಿಶೀಲನೆ ನಡೆಸಿ ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ~ ಎಂದು ಭರವಸೆ ನೀಡಿದರು.

ನಂತರ ಅಣಕು ಶವವನ್ನು ದಹನ ಮಾಡಲಾ ಯಿತು.ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರಾದ ಗುರುರಾಜ ಭಟ್, ಶಿವು ಹಲಗಿ, ಎಸ್.ವಿ.ಕಲ್ಲಾಪುರ, ಸುಧೀರ್ ಛತ್ರಿ, ನಾಗರಾಜ ಕುಲಕರ್ಣಿ, ಬಸವರಾಜ ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT