ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿಯೇ ಇಲ್ಲ : ದಾರಿ ಪಕ್ಕದಲ್ಲಿಯೇ ಶವ ಸಂಸ್ಕಾರ !

Last Updated 16 ಜುಲೈ 2012, 9:25 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ  ಮುದಗುಣಕಿ ಎಲ್ಲ ಸೌಲಭ್ಯಗಳಿದ್ದರೂ ರುದ್ರಭೂಮಿಯ ಸೌಲಭ್ಯವೇ ಇಲ್ಲ. ಇದರಿಂದ ಇಲ್ಲಿಯ ಜನ ರೋಸಿ ಹೋಗಿದ್ದು ಗ್ರಾಮದಲ್ಲಿ  ಯಾರಾದರೂ ಮರಣವನ್ನಪಿದಾಗ ತಾಲ್ಲೂಕು ಆಡಳಿತ ವಿರುದ್ಧ ಶಪಿಸುವ ಕಾರ್ಯ ನಿರಂತರ ನಡದೇ ಇದೆ. ಆದರೆ ಇದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಅವ್ಯವಸ್ಥೆ  ಹಲವಾರು ದಶಕಗಳಿಂದ  ಇದ್ದರೂ ತಾಲ್ಲೂಕು ಹಾಗೂ  ಜಿಲ್ಲಾಡಳಿತವಾಗಲಿ ಕೊನೆಗೂ ಗ್ರಾಮ ಪಂಚಾಯಿತಿ ಲಕ್ಷ್ಯವಹಿಸಿಲ್ಲ. 

 ಈ ಕುರಿತು  ಪ್ರತಿಯೊಂದು ಸಭೆಯಲ್ಲಿ ಗ್ರಾಮಸ್ಥರು  ಅಧಿಕಾರಿಗಳಿಗೆ ಮನವಿ  ಮಾಡಿದ್ದರೂ  ಪ್ರಯೋಜನವಾಗಿಲ್ಲ.  1986ರಲ್ಲಿ ಅಖಂಡ ಧಾರವಾಡ  ಜಿಲ್ಲೆ ಇದ್ದಾಗ  ಖಬರಸ್ಥಾನ ಹಾಗೂ ರುದ್ರಭೂಮಿ  ಸ್ಥಾಪಿಸಲು ಲಿಖಿತವಾಗಿ  ಮನವಿ ಮಾಡಲಾಗಿತ್ತು.  

  ಶವ ಸಂಸ್ಕಾರ  ಕಷ್ಟ: ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ  ಅವರನ್ನು ರೋಣ ರಸ್ತೆ ಬಳಿ ಪಕ್ಕದಲ್ಲಿ ಸುಡುವ  ಮೂಲಕ ಶವಸಂಸ್ಕಾರ ಮಾಡಬೇಕಾಗುತ್ತದೆ. ಒಂದೇ ವೇಳೆ ಮಳೆ ಬಂತೆಂದರೆ  ಆ ಸಂದರ್ಭ,  ಸ್ಥಿತಿ ಹೇಳ ತೀರದಾಗುತ್ತದೆ. ಈ ಮೊದಲು ಊರ ಬಳಿಯ ಓರ್ವರ ಹೊಲದಲ್ಲಿ ಶವ ಸಂಸ್ಕಾರ ನಡೆಯುತ್ತಿತ್ತು ಈಗ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಇದರಿಂದ ಈ ಗ್ರಾಮದ ಜನರಿಗೆ ರುದ್ರಭೂಮಿ ಇಲ್ಲದೇ ನರಕಯಾತನೆ ಪಡುವಂತಾಗಿದೆ.

ಮುಸ್ಲಿಂರ ಪಾಡಂತೂ  ಹೇಳತೀರದು : ಗ್ರಾಮದಲ್ಲಿ ಬೆರಳೆಣಿಕೆಯಲ್ಲಿ ಮುಸ್ಲಿಂ ಸಮುದಾಯವಿದ್ದರೂ ಅವರಲ್ಲಿ ಮರಣ ಹೊಂದಿದಾಗ ಅವರ ಶವ ಸಂಸ್ಕಾರ ಮಾಡಬೇಕಾದರೆ ಖಬರಸ್ಥಾನ ಇಲ್ಲದ ಪರಿಣಾಮ ಅವರ ದು:ಸ್ಥಿತಿ ಹೇಳತೀರದು. ಇದು ಒಂದು ದೊಡ್ಡ  ಸಮಸ್ಯೆಯಾಗಿ ಕಾಡುತ್ತಿದೆ. 

  ಹೀಗೆ ರುದ್ರ ಭೂಮಿ ಹಾಗೂ ಖಬರಸ್ಥಾನ ಕುರಿತು  ಹಲವಾರು ದಶಕಗಳಿಂದಲೂ ಮನವಿ ಮಾಡಿದರೂ  ಪ್ರಯೋಜನವಾಗುತ್ತಿಲ್ಲ,  ಶೀಘ್ರ ತಾಲ್ಲೂಕು ಆಡಳಿತ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ  ಶವ ಸಂಸ್ಕಾರ ಮಾಡಲು  ರಸ್ತೆಯನ್ನೇ ಅಗೆದು ಅಲ್ಲಿಯೇ ರುದ್ರಭೂಮಿ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.   

 ಈ ಕರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಯಾರಾದರೂ ಭೂಮಿ ಕೊಡುವವರು ಮುಂದೆ  ಬಂದರೆ ಅದನ್ನು ರುದ್ರಭೂಮಿಗೆ ಬಳಸಿ ಸರಕಾರದ ನಿಯಮಗಳಿಗೆ ಅನುಗುಣವಾಗಿ ಜಮೀನಿಗೆ ಹಣ ನೀಡಿ ರುದ್ರಭೂಮಿ ನಿರ್ಮಾಣ ಮಾಡಲಾಗುದು ಎನ್ನುತ್ತಾರೆ. ಆದರೆ  ಸರಕಾರ ನೀಡುವ ಹಣ ಕಡಿಮೆಯಾಗುತ್ತಿರುವುದರಿಂದ ರುದ್ರಭೂಮಿಗೆ ಜಮೀನು ನೀಡಲು ಯಾರು ಮುಂದೆ ಬರುತ್ತಿಲ್ಲ. 

 ಇದರಿಂದ  ರುದ್ರಭೂಮಿ ನಿರ್ಮಾಣ ಕಗ್ಗಂಟಾಗಿ ಉಳಿದಿದೆ.  ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು  ಹಾಗೂ ತಹಶೀಲ್ದಾರರು ಇತ್ತ ಗಮನಹರಿಸಿ ಕೂಡಲೇ  ರುದ್ರಭೂಮಿ  ನಿರ್ಮಾಣ ಮಾಡಬೇಕೆಂಬುದು  ಗ್ರಾಮಸ್ಥರ ಆಶಯವಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT