ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 100 ಕೋಟಿ ವೆಚ್ಚದಲ್ಲಿ ಪುಂಡಾನೆ ತಡೆ ಯೋಜನೆ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆನೆಗಳು ನಾಡಿಗೆ ನುಗ್ಗದಂತೆ ತಡೆಯಲು ನಾಗರಹೊಳೆಯಲ್ಲಿ ರೂ100 ಕೋಟಿ   ವೆಚ್ಚದಲ್ಲಿ ಯೋಜನೆ ಆರಂಭಿಸ­ಲಾಗಿದ್ದು, ಈಗಾಗಲೇ ರೂ 30 ಕೋಟಿ  ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಖಾತೆ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ನಗರದ ಅರಣ್ಯ ಭವನ ಆವರಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಅರಣ್ಯ ರಕ್ಷಕರ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ನಂತರ ಸುದ್ದಿಗಾರ­ರೊಂದಿಗೆ ಮಾತನಾಡಿದ ಅವರು, ಆನೆಗಳು ನಾಡಿಗೆ ನುಗ್ಗದಂತೆ ತಡೆಯಲು ನಾಗರಹೊಳೆಯಲ್ಲಿ ಕಂದಕ ಮತ್ತು ಸೌರವಿದ್ಯುತ್‌ನಿಂದ ಬೇಲಿ ನಿರ್ಮಿಸಲಾ­ಗುತ್ತಿದೆ. ಇದೊಂದು ಆನೆಗಳ ತಾಣವಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 6200 ಆನೆಗಳಿವೆ. ಮಡಿಕೇರಿ, ಹಾಸನ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಮಡಿಕೇರಿಯ ತೋಟಗಳಲ್ಲಿ ಸುಮಾರು 34 ಆನೆಗಳಿವೆ  ಎಂದು ಅವರು ತಿಳಿಸಿದರು.

‘ಆನೆದಂತ ಸದ್ಯಕ್ಕೆ ನಾಶ ಇಲ್ಲ’
ರಾಜ್ಯದಲ್ಲಿರುವ ಸುಮಾರು 94 ಕ್ವಿಂಟಲ್‌ನಷ್ಟು ಆನೆದಂತಗಳನ್ನು ನಾಶಪಡಿ­ಸುವ ಕುರಿತು ಅರಣ್ಯ ಇಲಾಖೆ ಇದುವರೆಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾ ಧಿಕಾರಿ ಜಿ.ಎಸ್‌. ಪ್ರಭು ತಿಳಿಸಿದರು.

ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ಎಲ್ಲ ಆನೆ ದಂತಗಳನ್ನು ನಾಶಪಡಿಸುವಂತೆ ಸೂಚನೆ ನೀಡಿ ರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಆನೆ ದಂತಗಳನ್ನು ನಾಶ ಪಡಿಸಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆ ಯು  ಅಧ್ಯಯನಕ್ಕಾಗಿ ಹಲವು ಆನೆ ದಂತ ನೀಡುವಂತೆ ಕೋರಿದೆ.  ದಂತ ಗಳನ್ನು ವಿಶ್ಲೇಷಣೆ ಮಾಡಿ ಆನೆಗಳ ವಯಸ್ಸು ಮುಂತಾದ ವಿವರಗಳ ಬಗ್ಗೆ ಈ ಸಂಸ್ಥೆ ಅಧ್ಯಯನ ನಡೆಸ ಲಿದೆ. ಇದೇ ರೀತಿ ರಕ್ಷಣಾ ಇಲಾಖೆ 12 ಯುನಿಟ್‌ ಆನೆದಂತಗಳನ್ನು ನೀಡು ವಂತೆ ಕೋರಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷದಲ್ಲಿ   ಒಂದು ವರ್ಷದಲ್ಲಿ 27 ಮಂದಿ ಮೃತಪಟ್ಟಿ­ದ್ದಾರೆ. ಆನೆಗಳ ಹಾವಳಿಯಿಂದ ಮೃತಪಟ್ಟಾಗ ಸಾರ್ವಜನಿಕರ ಆಕ್ರೋಶ ತೀವ್ರವಾಗಿರುತ್ತದೆ. ಇದ ರಿಂದ ಆತಂಕದ ವಾತಾವರಣ ನಿರ್ಮಿ ಸಲಾಗುತ್ತಿದೆ.  ಆದರೆ, ಅಪಘಾತ ದಲ್ಲಿ ಎಂಟು ಸಾವಿರ ಮಂದಿ ಸಾವಿಗೀ ಡಾಗಿದ್ದು, 10ರಿಂದ 15 ಸಾವಿರ ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆಯೂ ಸಾರ್ವಜನಿಕರು ಹೆಚ್ಚು ಗಮನಹರಿಸಬೇಕಾಗಿದೆ ಎಂದರು.

ಅರಣ್ಯ ಒತ್ತುವರಿ: ರಾಜ್ಯದಲ್ಲಿ 1.10 ಲಕ್ಷ ಹೆಕ್ಟೇರ್‌ ಅರಣ್ಯ ಪ್ರದೇಶ ಒತ್ತು ವರಿಯಾಗಿದೆ. ಈ ಹಿಂದೆ ಒತ್ತುವರಿ ಯಾಗಿದ್ದ 40 ಸಾವಿರ ಹೆಕ್ಟೇರ್‌ ಪ್ರದೇಶವನ್ನು ತೆರವುಗೊಳಿಸ­ಲಾಗಿದೆ. ಕೆಲವೆಡೆ ಅರಣ್ಯ ಪ್ರದೇಶವನ್ನು ಒತ್ತು ವರಿ ಮಾಡಿ ನಿವೇಶನಗಳನ್ನು ಮಾಡ ಲಾಗಿದೆ. ಇಂತಹ ಪ್ರದೇಶಗಳನ್ನು ಗುರುತಿಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯಲ್ಲಿ ಪ್ರಸ್ತುತ 18 ಸಾವಿರ ಸಿಬ್ಬಂದಿ ಇದ್ದು, ಇನ್ನೂ ಕನಿಷ್ಠ 4ರಿಂದ 5 ಸಾವಿರ ಸಿಬ್ಬಂದಿ ಅಗತ್ಯವಿದೆ ಎಂದು ತಿಳಿಸಿದರು.

ಹುಲಿ ಗಣತಿ: ರಾಜ್ಯದ­ಲ್ಲಿ­ರುವ ಹುಲಿ ಗಣತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಸಿಬ್ಬಂದಿಗೆ ತಮಿಳುನಾಡಿನ ಪೆರಿ ಯಾರ್‌ ವನ್ಯಜೀವಿ ಧಾಮದಲ್ಲಿ ತರ ಬೇತಿ ನೀಡಲಾಗುವುದು. ನವೆಂಬರ್‌, ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಗಣತಿ ಕಾರ್ಯಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT