ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ. 1,259 ಕೋಟಿ ಬೆಳೆ ಸಾಲ ವಿತರಣೆ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ 1ರ ಬಡ್ಡಿ ದರದಲ್ಲಿ ರೂ. 1,259 ಕೋಟಿ   ಬೆಳೆ ಸಾಲ ನೀಡಲಾಗಿದೆ~ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.

`ಎರಡು ತಿಂಗಳಲ್ಲಿ ಪಡೆದ ದಾಖಲೆ ಪ್ರಮಾಣದ ಸಾಲ ಇದು. ಒಟ್ಟು 3,43,641 ಮಂದಿ ರೈತರು ಹೊಸದಾಗಿ ಸಾಲ ಪಡೆದಿದ್ದಾರೆ~ ಎಂದು ವಿವರಿಸಿದರು.

`ವಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರು ಅತಿ ಹೆಚ್ಚು ಸಾಲ ಪಡೆದಿದ್ದಾರೆ. `ಪ್ರತಿವಾರವೂ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯ ಪ್ರಗತಿ ಪರಿಶೀಲಿಸಲಾಗುವುದು~ ಎಂದರು.

`2010-11ನೇ ಸಾಲಿನಲ್ಲಿ ಶೇ 88ರಷ್ಟು ಸಾಲ ವಸೂಲಾಗಿದೆ. ಈ ವರ್ಷ ಅದು ಶೇ 95ರಷ್ಟಾಗುವ ಸಾಧ್ಯತೆ ಇದೆ~ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT