ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 125ಕೋಟಿ ಸಂಗ್ರಹ: ವಾಲ್ಮಾರ್ಕ್ ರಿಯಾಲ್ಟಿ ಗುರಿ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ `ವಾಲ್ಮಾರ್ಕ್ ಇನ್ಫ್ರಾ ಅಂಡ್ ರಿಯಾಲ್ಟಿ ಟ್ರಸ್ಟ್' 5 ವರ್ಷದ `ವಾಲ್ಮಾರ್ಕ್ ರಿಯಾಲ್ಟಿ ಫಂಡ್' ಪರಿಚಯಿಸಿದ್ದು, ್ಙ125 ಕೋಟಿ ಸಂಗ್ರಹ ಗುರಿ ಇಟ್ಟುಕೊಂಡಿದೆ.

`ಪರ್ಯಾಯ ಹೂಡಿಕೆ ನಿಧಿ ಶ್ರೇಣಿ-2ರಲ್ಲಿ ಬರುವ ಖಾಸಗಿ ಕಂಪೆನಿಗಳಲ್ಲಿ ವಿನಿಯೋಜಿಸುವ ಯೋಜನೆಯಾಗಿದೆ. ಕನಿಷ್ಠ ಹೂಡಿಕೆ ್ಙ1 ಕೋಟಿ' ಎಂದು ಮಾನ್ಯತಾ -ವಾಲ್ಮಾರ್ಕ್ ಸಮೂಹ ಸಂಸ್ಥಾಪಕ ತೇಜ್‌ರಾಜ್ ಗುಲೇಛಾ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಗ್ರಹವಾಗುವ ಹಣವನ್ನು `ದ ಗ್ರೀನ್ಸ್' ಸೇರಿದಂತೆ ನಗರದ ಐದಾರು ಗೃಹ ನಿರ್ಮಾಣ ಸಂಸ್ಥೆಗಳಲ್ಲಿ ಹೂಡಲಾಗುವುದು. ನಿಗದಿತ ಯೋಜನೆ ಪೂರ್ಣಗೊಂಡ ನಂತರ ಬರುವ ಲಾಭದಲ್ಲಿ ಹೂಡಿಕೆದಾರರಿಗೆ ಶೇ 80, ಸಂಸ್ಥಾಪಕರಿಗೆ ಶೇ 20ರಷ್ಟು ಪಾಲು ಲಭ್ಯ. ವಾರ್ಷಿಕ ಶೇ 15ರಷ್ಟು ಗಳಿಕೆ ಖಚಿತ ಎಂದು `ಮುನೋತ್ ಫೈನಾನ್ಷಿಯಲ್ಸ್' ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಸ್ವಂತ್ ಮುನೋತ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT