ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 2.12 ಕೋಟಿ ಮೌಲ್ಯದ ವಸ್ತುಗಳ ಜಪ್ತಿ, ಬಂಧನ

Last Updated 9 ಡಿಸೆಂಬರ್ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ನಗರದ ದಕ್ಷಿಣ ವಿಭಾಗದ ಪೊಲೀಸರು 106 ಆರೋಪಿಗಳನ್ನು ಬಂಧಿಸಿ ರೂ 2.12 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಸಿಬ್ಬಂದಿ ಎರಡು ತಿಂಗಳಲ್ಲಿ 161 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿ ರೂ 8.83 ಲಕ್ಷ ನಗದು, ಸುಮಾರು ಮೂರು ಕೆ.ಜಿ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿ­ದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗೆ ಒಟ್ಟು ರೂ 2 ಲಕ್ಷ ಬಹುಮಾನ ನೀಡಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಸೋಮ­ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು’ ಎಂದರು.

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸರು ಬೈಕ್‌ ರ್‌್ಯಾಲಿ ನಡೆಸಿದರು.

ಗಿರಿನಗರ: ಪೂರ್ಣಿಮಾ ದಿನೇಶ್‌ ಎಂಬ ವೈದ್ಯೆಯನ್ನು ಅಡ್ಡಗಟ್ಟಿ ಚಿನ್ನಾ­ಭರಣ ದೋಚಿದ್ದ ಆರೋಪದ ಮೇಲೆ ಚನ್ನಮ್ಮನಕೆರೆ ಅಚ್ಚು­ಕಟ್ಟಿನ ಬಾಲಾಜಿ ಲೇಔಟ್‌ ನ ಮುರಳಿ (24) ಎಂಬಾತ­ನನ್ನು ಗಿರಿನಗರ ಪೊಲೀ­ಸರು ಬಂಧಿ­ಸಿ­ದ್ದಾರೆ.

ಆರೋಪಿ ನ.26 ರಂದು ರಾತ್ರಿ ಗಿರಿನಗರ 1ನೇ ಹಂತದಲ್ಲಿ ಬೈಕ್‌­ನಲ್ಲಿ ಹೋಗುತ್ತಿದ್ದ ಪೂರ್ಣಿಮಾ ಅವ­ರನ್ನು ಅಡ್ಡಗಟ್ಟಿ 60 ಗ್ರಾಂ ತೂಕದ ಚಿನ್ನದ ಸರ ಮತ್ತು ಬೈಕ್‌ ಕಿತ್ತು­ಕೊಂಡು ಪರಾರಿಯಾಗಿದ್ದ.

ಕುದುರೆ ಜೂಜಿನಲ್ಲಿ ಹಣ ಕಳೆದು­ಕೊಂಡಿದ್ದ ಮುರಳಿ, ಸಾಲದ ಹಣ ತೀರಿ­ಸುವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಂಪೇಗೌಡನಗರ: ರಾಜರಾಜೇಶ್ವರಿ­ನಗರ ಸಮೀಪದ ಕೆಂಚೇನಹಳ್ಳಿಯ ಲೋಕೇಶ್ (38) ಎಂಬಾತನನ್ನು ಬಂಧಿಸಿರುವ ಕೆಂಪೇಗೌಡನಗರ ಪೊಲೀ­ಸರು 350 ಗ್ರಾಂ ಆಭರಣ ಗಳನ್ನು ವಶಪಡಿಸಿ ಕೊಂಡಿದ್ದಾರೆ.

ನಗರ್ತಪೇಟೆಯ ಸುರೇಶ್ ಜ್ಯುವೆ­ಲರ್ಸ್‌ ಮಳಿಗೆಯಲ್ಲಿ 20 ವರ್ಷಗ­ಳಿಂದ ಕೆಲಸ ಮಾಡುತ್ತಿದ್ದ ಆತ ಮಾಲೀ­ಕರಿಗೆ ಗೊತ್ತಾಗದಂತೆ ಹಲವು ಬಾರಿ ಚಿನ್ನಾ­ಭರಣ ಕಳವು ಮಾಡಿ, ಆಭರಣ­ಗಳನ್ನು ಮಾರಾಟ ಮಾಡಿ ಕೆಂಚೇನ­ಹಳ್ಳಿ­ಯಲ್ಲಿ ಸುಮಾರು ರೂ 70 ಲಕ್ಷ ಮೌಲ್ಯದ ಮನೆ ಕಟ್ಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT