ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 500ಕೋಟಿ ಎನ್‌ಸಿಡಿ ‘ಐಐಎಚ್‌ಎಲ್‌’ ಗುರಿ

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಸತಿ ಯೋಜನೆ ಹಣ ಕಾಸು ಸೇವಾ ಕ್ಷೇತ್ರದ ಸಂಸ್ಥೆ ‘ಇಂಡಿಯ ಇನ್ಫೊಲೈನ್‌ ಹೌಸಿಂಗ್‌ ಲಿ.’(ಐಐಎಚ್‌ ಎಲ್‌), ಸಾರ್ವಜನಿಕರ ಹೂಡಿಕೆಗೆ ಅವ ಕಾಶವಿರುವ ಶೇ 11.52ರಷ್ಟು ನಾನ್‌ ಕನ್ವರ್ಟಬಲ್‌ (ಮರು ಖರೀದಿ ಅವಕಾ ಶದ, ಆದರೆ ಪರಿವರ್ತನೆಗೆ ಆಸ್ಪದವಿ ಲ್ಲದ) ಡಿಬೆಂಚರ್‌ಗಳನ್ನು ಡಿ. 12ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆ ಮೂಲಕ ₨250 ಕೋಟಿಯಿಂದ ₨500 ಕೋಟಿ ಸಂಗ್ರಹ ಗುರಿ ಇಟ್ಟು ಕೊಂಡಿದೆ.

ಕೆನರಾ ಬ್ಯಾಂಕ್‌ ಒಪ್ಪಂದ
ಬೆಂಗಳೂರು: ಶೈಕ್ಷಣಿಕ ಸಾಲ ಯೋಜನೆ ಯಡಿ ಆರ್ಥಿಕ ನೆರವು ಬಯಸುವ ಶಿಕ್ಷ ಣಾರ್ಥಿಗಳಿಗೆ ಕೌಶಲ ತರಬೇತಿ ನೀಡುವು ದಕ್ಕೆ ಸಂಬಂಧಿಸಿದಂತೆ ನವದೆಹಲಿಯ ‘ನ್ಯಾಷನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌’(ಎನ್‌ಎಸ್‌ಡಿಸಿ) ಜತೆ ಕೆನರಾ ಬ್ಯಾಂಕ್‌ ಒಪ್ಪಂದ ಮಾಡಿ ಕೊಂಡಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಸ್‌.ಎಸ್‌.ಭಟ್‌ ಮತ್ತು ‘ಎನ್‌ಎಸ್‌ಡಿಸಿ’ಯ ‘ಸಿಒಒ’ ಅತುಲ್ ಭಟ್ನಾಗರ್‌ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT