ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 57 ಸಾವಿರ ಕೋಟಿ ತೆರಿಗೆ ಮರು ಪಾವತಿ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್) ಸಲ್ಲಿಸಿದವರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆರೂ 57 ಸಾವಿರ ಕೋಟಿ ತೆರಿಗೆ ಮರು ಪಾವತಿ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ತೆರಿಗೆ ಮರು ಪಾವತಿಯಲ್ಲಿ ಕಡಿಮೆ ವರಮಾನ ಹೊಂದಿರುವ ಚಂದಾದಾರರಿಗೆ ಮೊದಲ ಆದ್ಯತೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಪ್ರಸಕ್ತ ವರ್ಷ ಒಟ್ಟುರೂ70 ಸಾವಿರ ಕೋಟಿ ತೆರಿಗೆ ಮರು ಪಾವತಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ನೇರ ತೆರಿಗೆರೂ3.25 ಲಕ್ಷ ಕೋಟಿ
ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಶೇ 7.14ರಷ್ಟು ಹೆಚ್ಚಿದ್ದುರೂ3.25 ಲಕ್ಷ ಕೋಟಿಯಷ್ಟಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿರೂ3.04 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿತ್ತು.
ಕಳೆದ ಎಂಟು ತಿಂಗಳಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹ ಶೇ 3ರಷ್ಟು ಹೆಚ್ಚಿರೂ2.05 ಲಕ್ಷ ಕೋಟಿಯಷ್ಟಾಗಿದೆ. ಆದಾಯ ತೆರಿಗೆ ಸಂಗ್ರಹವೂ ಶೇ 15ರಷ್ಟು ಹೆಚ್ಚಿದ್ದುರೂ1.19 ಲಕ್ಷ ಕೋಟಿಗೆ ಏರಿದೆ. ಸಂಪತ್ತು ತೆರಿಗೆ ಸಂಗ್ರಹರೂ619 ಕೋಟಿಯಷ್ಟಾಗಿದ್ದು, ಶೇ 27.10ರಷ್ಟು ಹೆಚ್ಚಳವಾಗಿದೆ.
ಸಾಲಪತ್ರಗಳ ವಹಿವಾಟು ತೆರಿಗೆ (ಎಸ್‌ಟಿಐ) ಶೇ 13ರಷ್ಟು ಕುಸಿದುರೂ2,914 ಕೋಟಿಗೆ ತಗ್ಗಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ನೇರ ತೆರಿಗೆ ಸಂಗ್ರಹದಲ್ಲಿ ಶೇ 15ರಷ್ಟು  ಹೆಚ್ಚಳವನ್ನು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT