ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ 6.45 ಲಕ್ಷ ನಗದು, ರೂ 1.52 ಲಕ್ಷ ಮೌಲ್ಯದ ವಸ್ತು ವಶ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ವಿವಿಧಡೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 14 ಜನರನ್ನು ಸೋಮವಾರ ಬಂಧಿಸಿರುವ ಪೊಲೀಸರು ರೂ 6.45 ಲಕ್ಷ ನಗದು ಹಾಗೂ 1.52 ಲಕ್ಷ ರೂ. ಬೆಲೆಯ ಟಿವಿ, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ವಿಶ್ವ ಕಪ್ ಕ್ರಿಕೆಟ್‌ನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಲೀಗ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಂಧಿತರು ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

ಮಿಲ್ಲರ್‌ಪೇಟೆ, ರಾಘವೇಂದ್ರ ಕಾಲೋನಿ, ತಿಲಕ್‌ನಗರ, ಕೌಲ್‌ಬಝಾರ್ ಪ್ರದೇಶ ನಿವಾಸಿಗಳಾದ ನವೀನ್, ಮುನ್ನಾ, ರವಿ, ಸುರೇಶ, ಬಿ.ಕೇಶವಮೂರ್ತಿ, ಸುಶೀಲ್ ಕುಮಾರ, ರಾಮಾಂಜಿನಿ, ಗಜೇಂದ್ರ, ವಿಜಯ ಕುಮಾರ, ವಿರೇಶ್, ಡಿ.ಬಸವರಾಜ, ಪಿ.ಚಂದ್ರ, ರಾಕೇಶ್, ಶಿವು  ಅವರನ್ನು ಬಂಧಿಸಲಾಗಿದೆ.

ಗ್ರಾಮೀಣ, ಕೌಲ್‌ಬಝಾರ್, ಬ್ರೂಸ್‌ಪೇಟೆ, ಗಾಂಧಿನಗರ ಠಾಣೆ ಹಾಗೂ ಡಿಸಿಐಬಿ ಪೊಲೀಸರು ಜಂಟಿ ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಟಿವಿ, ಮೊಬೈಲ್ ಫೋನ್ ಮತ್ತಿತರರ ಉಪಕರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT