ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂ ಮೌಲ್ಯ ಇನ್ನಷ್ಟು ಕುಸಿತ ಸಾಧ್ಯತೆ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೂಪಾಯಿ ಬೆಲೆಯು 2011ರಲ್ಲಿ ಗಮನಾರ್ಹ ಕುಸಿತ ಕಂಡಿದ್ದು, 2012ರಲ್ಲಿಯೂ ಡಾಲರ್ ಎದುರು ಅದರ ವಿನಿಮಯ ದರ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ಸಂಶೋಧನಾ ಸಂಸ್ಥೆ `ಮ್ಯಾಕ್ವೈರ್~ ಪ್ರಕಾರ, ರೂಪಾಯಿ ವಿನಿಮಯ ದರವು  ಈ ವರ್ಷ ಪ್ರತಿ ಡಾಲರ್‌ಗೆ 55 ರಿಂದ 56ರ ಮಟ್ಟಕ್ಕೆ ಏರಲಿದೆ. ವರ್ಷದ ಎರಡನೆ ಮಧ್ಯ ಭಾಗದಲ್ಲಿ ಕೆಲ ಮಟ್ಟಿಗೆ ಚೇತರಿಕೆ ಕಾಣುವ ಸಾಧ್ಯತೆಯೂ ಇದೆ.

ರೂಪಾಯಿ ವಿನಿಮಯ ದರವು ಇನ್ನಷ್ಟು ದುರ್ಬಲವಾಗಿಯೇ ಇರಲಿದ್ದು, ಸರಾಸರಿ 51ರ ಮಟ್ಟ ಕಾಯ್ದುಕೊಳ್ಳಲಿದೆ. ದುರ್ಬಲ ರೂಪಾಯಿಗೆ ಬಲ ತುಂಬಲು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಕೆಲ ಕ್ರಮಗಳನ್ನು ಕೈಗೊಂಡಿದ್ದರೂ ಅವು ಸಾಲುವುದಿಲ್ಲ ಎಂದು `ಮ್ಯಾಕ್ವೇರ್~ ತಿಳಿಸಿದೆ. ರೂಪಾಯಿ ವಿನಿಮಯ ದರದ ಏರಿಳಿತ ನಿಯಂತ್ರಿಸಲು `ಆರ್‌ಬಿಐ~ ಮಧ್ಯಪ್ರವೇಶಿಸಿದ್ದರೂ, ಅದರಿಂದ ಯಶಸ್ಸು ನಿರೀಕ್ಷಿಸುವಂತಿಲ್ಲ. 

2011ರ ಆಗಸ್ಟ ತಿಂಗಳಿನಿಂದೀಚೆಗೆ ರೂಪಾಯಿ ವಿನಿಮಯ ದರವು  ಶೇ 20.6ರಷ್ಟು ಕುಸಿತ ಕಂಡಿದೆ. ಡಾಲರ್ ಎದುರು ಇತರ ಕರೆನ್ಸಿಗಳೂ ಬೆಲೆ ಕುಸಿತ ಕಂಡಿದ್ದರೂ ರೂಪಾಯಿ ಬೆಲೆ ಮಾತ್ರ ಗಮನಾರ್ಹವಾಗಿ ಕುಸಿದಿದೆ. ಇದಕ್ಕೆ ದೇಶದ ಚಾಲ್ತಿ ಖಾತೆ ಕೊರತೆ ಗರಿಷ್ಠ ಪ್ರಮಾಣದಲ್ಲಿ ಇರುವುದೇ ಮುಖ್ಯ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT