ಈ ವಿಶಿಷ್ಟ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಮಂಗಳೂರು, ಹೈದರಾಬಾದ್, ಜೈಪುರ, ಅಹಮದಾಬಾದ್, ದೆಹಲಿ, ಪುಣೆ, ಮುಂಬೈ, ಬರೋಡಾ, ಕೋಲ್ಕೊತಾ, ನಾಗ್ಪುರಕ್ಕೂ ವಿಸ್ತರಿಸಲಾಗುವುದು ಎಂದು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಶೀಶ್ ಪುರವಂಕರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಪ್ರಾವಿಡೆಂಟ್ ಸನ್ವರ್ಥ್'ನಲ್ಲಿ ಮಲ್ಟಿಪಲ್ ಕ್ಲಬ್ ಹೌಸ್, ಈಜುಕೊಳ, ವ್ಯಾಯಾಮ ಶಾಲೆ ಉದ್ಯಾನವನ, ಆಟದ ಜಾಗ, ಸೂಪರ್ ಮಾರ್ಕೆಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿರಲಿವೆ. ಹಾಗಿದ್ದೂ ಇಲ್ಲಿನ ಮನೆಗಳು ಮಾರುಕಟ್ಟೆಗಿಂತ ಶೇ 20ರಷ್ಟು ಕಡಿಮೆ ದರದಲ್ಲಿ ಲಭ್ಯವಿವೆ. 2 ಕೊಠಡಿ ಮನೆಗೆ ರೂ. 29.75 ಲಕ್ಷ ಮತ್ತು 3 ಕೊಠಡಿ ಗೃಹಕ್ಕೆ ರೂ. 35.96 ಲಕ್ಷ ದರವಿದೆ ಎಂದರು.
ಈ ಉಪ ನಗರ ಮೈಸೂರು ರಸ್ತೆಯಲ್ಲಿ ನೈಸ್ ವೃತ್ತದ ಸಮೀಪ ನಿರ್ಮಾಣಗೊಳ್ಳುತ್ತಿದೆ. 60 ಲಕ್ಷ ಚದರಡಿಯ ಈ ಬೃಹತ್ ನಿರ್ಮಾಣ ಯೋಜನೆ 60 ಎಕರೆಯಲ್ಲಿ ವ್ಯಾಪಿಸಿಕೊಳ್ಳಲಿದೆ ಎಂದು `ಪುರವಂಕರ ಸಮೂಹ'ದ `ಸಿಇಒ' ಜಾಕ್ಬಾಸ್ಟಿಯನ್ ನಝರತ್ ವಿವರಿಸಿದರು.