ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪದರ್ಶಿಗಳ ಮೈಮೇಲೆ ಬುಡಕಟ್ಟು ಬಟ್ಟೆ

Last Updated 9 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪಿಕ್ಚರ್ ಪ್ಯಾಲೆಸ್

ಕಲೆ, ಕೌಶಲ್ಯ, ಕ್ರಿಯಾಶೀಲತೆ ಹಾಗೂ ಹೊಸತನದ ಮೂಸೆಯೊಳಗೆ ವಿನ್ಯಾಸಗೊಂಡ ವಸ್ತ್ರ ತೊಟ್ಟ ರೂಪದರ್ಶಿಗಳು ರ‌್ಯಾಂಪ್ ಮೇಲೆ ಸರಿದಾಡಿದಾಗ ಮೊಗಸಾಲೆಯಲ್ಲಿ ಮಿಂಚು ಸಂಚರಿಸಿದ ಅನುಭವ.

ಚೆಂದದ ಹುಡುಗಿಯರ ಮೈಮೇಲೆ ಅಂದು ಅಲೆಮಾರಿ ಜನರ ಅಂದದ ಉಡುಪುಗಳಿದ್ದವು. ಶಿಲ್ಪಿ ಚೌಧರಿ ವಿನ್ಯಾಸಗೊಳಿಸಿದ ವಸ್ತ್ರ ಧರಿಸಿದ್ದ ರೂಪದರ್ಶಿಗಳ ಮೈಮಾಟ ನೋಡುಗರನ್ನು ಪುಳಕಿತಗೊಳಿಸಿದವು. ಅಂದಹಾಗೆ, ಈಕೆಯ ವಸ್ತ್ರವಿನ್ಯಾಸಕ್ಕೆ ಪ್ರೇರಣೆ ತುಂಬಿದ್ದು ಒಡಿಶಾ ವಾಲ್ ಪೇಂಟಿಂಗ್ಸ್ ಮತ್ತು ಪ್ರಾಚೀನ ಈಜಿಪ್ಟ್ ಜನರ ವೇಷ ಭೂಷಣಗಳು. 


ಸರ್ಜಾಪುರದ ಕಂಟ್ರಿ ಕ್ಲಬ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಕಾಮನಬಿಲ್ಲಿನ ಸೊಬಗು. ಶಿಲ್ಪಿ ಚೌಧರಿ `ಸೌರ~ ಕಲೆಕ್ಷನ್‌ನಲ್ಲಿ ಪ್ರದರ್ಶಿಸಿದ ಒಡಿಶಾದ ಬುಡಕಟ್ಟು ಜನರ ಕಲೆ ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ಮೂಡಿದ್ದವು.

ರೂಪದರ್ಶಿಗಳ ತಲೆ ಮೇಲಿದ್ದ ರುಮಾಲು ಮಧ್ಯಕಾಲೀನ ಯಗದಲ್ಲಿ ಬಳಸುತ್ತಿದ್ದ ಮುಂಡಾಸನ್ನು ನೆನಪಿಸುತ್ತಿತ್ತು. ಇದರ ಜತೆಗೆ ಅವರ ಮೈಮೇಲಿದ್ದ ವಸ್ತ್ರಗಳು ಆಕರ್ಷಕ ಕುಸುರಿ ಕಲೆಯಿಂದ ಕಂಗೊಳಿಸುತ್ತಿದ್ದವು. ರೂಪದರ್ಶಿಗಳು ಸರ್ವಾಂಗ ಸುಂದರ ವಸ್ತ್ರಧಾರಿಗಳಾಗಿ ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟಾಗ ಫ್ಯಾಷನ್ ಪಂಡಿತರಲ್ಲಿ ಮೆಚ್ಚುಗೆಯ ನೋಟವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT