ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪುಗೊಳ್ಳಲಿದೆ ತದ್ರೂಪಿ ಟೈಟಾನಿಕ್

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಟೈಟಾನಿಕ್ ಹಡಗು, ದುರಂತಕ್ಕೆ ಮತ್ತೊಂದು ಹೆಸರಾಗಿ ಕಾಡುತ್ತಿದ್ದರೂ ಆಸ್ಟ್ರೇಲಿಯಾದ ಉದ್ಯಮಿ ಕ್ಲೈವ್ ಪಾಮರ್ ಅವರು `ಟೈಟಾನಿಕ್-2~ ಹಡಗಿನ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಅಮೆರಿಕ- ಬ್ರಿಟನ್ ನಡುವೆ ಸಂಚರಿಸಲಿರುವ ಈ ಐಷಾರಾಮಿ ಹಡಗಿನ ಮೊದಲ ಯಾನಕ್ಕೆ ಈಗಾಗಲೇ 20,000ಕ್ಕೂ ಅಧಿಕ ಜನರು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಪಾಮರ್ ಹೇಳಿಕೊಂಡಿದ್ದಾರೆ.

100 ವರ್ಷಗಳ ಹಿಂದೆ ದುರಂತಕ್ಕೀಡಾಗಿದ್ದ ಟೈಟಾನಿಕ್ ಹಡಗನ್ನೇ ಇದು ಹೋಲಲಿದೆ. 21ನೇ ಶತಮಾನದ ಟೈಟಾನಿಕ್ ಚೀನಾದ ಹಡಗು ತಯಾರಿಕಾ ಘಟಕದಲ್ಲಿ ನಿರ್ಮಾಣವಾಗಲಿದೆ.  ಒಂಬತ್ತು ಅಂತಸ್ತಿನ ಈ ಐಷಾರಾಮಿ ಹಡಗು, 840 ಕೋಣೆಗಳನ್ನು ಹೊಂದಿರಲಿದೆ. ಫಿನ್‌ಲೆಂಡ್ ಮೂಲದ ಡೆಲ್ಟಾಮೆರಿನ್ ಎಂಬ ಕಂಪೆನಿ `ಟೈಟಾನಿಕ್-2~ನ ಸುರಕ್ಷತಾ  ಮತ್ತು ನಿರ್ಮಾಣ ನಿಯಂತ್ರಣ ನಿಯಮಗಳ ಮೇಲ್ವಿಚಾರಣೆ ನೋಡಿಕೊಳ್ಳಲಿದೆ. ಹಡಗು ನಿರ್ಮಾಣ ಕಾರ್ಯ 2016ರ ವೇಳೆಗೆ ಮುಗಿಯುವ ನಿರೀಕ್ಷೆ ಇದೆ.

`ದುರಂತಕ್ಕೀಡಾದ ಟೈಟಾನಿಕ್ ಹಡಗಿನಲ್ಲಿ ಸೇವೆ ಸಲ್ಲಿಸುತ್ತಿದ್ದವರ ಹಾಗೂ ಆ ದುರಂತದಲ್ಲಿ ಮಡಿದ ಪ್ರಯಾಣಿಕರ ನೆನಪಿಗಾಗಿ ಹೊಸ ಹಡಗನ್ನು ನಿರ್ಮಿಸಲಾಗುತ್ತಿದೆ~ ಎಂದು ಪಾಮರ್ ತಿಳಿಸಿದ್ದಾರೆ.

ಟೈಟಾನಿಕ್ ಹಡಗಿನ ಪ್ರತಿರೂಪದಂತಿರುವ ಹಡಗನ್ನೇ ನಿರ್ಮಿಸಲು ಪ್ರಾಶಸ್ತ್ಯ ನೀಡಲಾಗುವುದು. ಡೀಸೆಲ್ ಸಂಗ್ರಹ ಹಾಗೂ ಇಂಧನ  ದಕ್ಷತೆ ಅಧಿಕಗೊಳಿಸುವ ಸಲುವಾಗಿ, ನೀರಿನಲ್ಲಿ ಮುಳುಗುವ ಹಡಗಿನ ತಳಭಾಗದಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

1912ರಲ್ಲಿ ಸಂಭವಿಸಿದ್ದ ಟೈಟಾನಿಕ್ ದುರ್ಘಟನೆಯಲ್ಲಿ 1500 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT