ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಖೆಯಲ್ಲಿ ವಿಡಂಬನೆ

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನೂರಾರು ಪದಗಳಲ್ಲಿ ಹೇಳುವ ವಿಷಯವನ್ನು ಕೇವಲ ನಾಲ್ಕೈದು ರೇಖೆಗಳ ಮೂಲಕ ಮಾರ್ಮಿಕವಾಗಿ ತಿಳಿಸಿ, ತನ್ನ ಉದ್ದೇಶವನ್ನು ಸಾರ್ಥಕಪಡಿಸಿಕೊಳ್ಳುವ ಕಲೆ ವ್ಯಂಗ್ಯಚಿತ್ರ ಕಲೆ. ಹಾಸ್ಯದ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊಂದಿದ ವ್ಯಂಗ್ಯಚಿತ್ರಗಳು, ಕ್ಯಾರಿಕೇಚರ್‌ಗಳನ್ನು ನಿತ್ಯ ಪತ್ರಿಕೆಗಳಲ್ಲಿ ಗಮನಿಸುತ್ತೇವೆ. ಆದರೆ ವ್ಯಂಗ್ಯ ಚಿತ್ರಗಳ ಸಂಗ್ರಹವನ್ನೇ ಕಣ್ಣಾರೆ ಕಾಣುವ ಅವಕಾಶವನ್ನು ಮಂಗಳೂರು ಮೂಲದ ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ಮಾಡಿಕೊಟ್ಟಿದ್ದಾರೆ.

ಅವರ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನ, ಪ್ರಸ್ತುತ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ,ಪೋಗೋ ವಾಹಿನಿಯಲ್ಲಿ ಪ್ರಸಾರವಾಗುವ ಮಿ.ಬೀನ್‌ನ ನಾಯಕ ಹಾಗೂ ಕ್ರಿಕೆಟ್ ಆಟಗಾರರ ವ್ಯಂಗ್ಯಚಿತ್ರಗಳು ಗಮನ ಸೆಳೆಯುತ್ತವೆ.ಮುಖ್ಯವಾಗಿ ಚಂದ್ರನ್ ಚಿತ್ರಗಳು ರಾಜಕೀಯ ವಿಡಂಬನೆ ಮತ್ತು ಸಾಮಾಜಿಕ ಕಾಳಜಿ ಬಿಂಬಿಸುವ ವಸ್ತು ವಿಷಯ ಹೊಂದಿದ್ದು, ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಿವೆ.

ಹಲವಾರು ಪತ್ರಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡಿದ್ದು, ‘ನಿಮ್ಮಿ’,’ಅಣಕ’ ವೆಂಬ ಎರಡು ವ್ಯಂಗ್ಯಚಿತ್ರ ಸಂಕಲನಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಾಲಿವುಡ್ ನಟರಿಂದ ಹಿಡಿದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ವರೆಗೆ ಪ್ರಸಿದ್ಧ ನಾಯಕರು ಇವರ ಪೆನ್ನಿಗೆ ವಸ್ತುವಾಗಿದ್ದಾರೆ. ರಾಜಕೀಯ ಹೊರತಾಗಿ ಪರಿಸರ ಕಾಳಜಿ ಬಿಂಬಿಸುವ ಚಿತ್ರಗಳು ಗಮನ ಸೆಳೆಯುತ್ತವೆ. ಪ್ರದರ್ಶನ ಫೆ. 22ಕ್ಕೆ ಮುಕ್ತಾಯ.
ಸ್ಥಳ: ಇಂಡಿಯನ್ ಕಾರ್ಟೂನ್ ಗ್ಯಾಲರಿ, ಮಿಡ್ ಫೋರ್ಡ್‌ಹೌಸ್, ಎಂ.ಜಿ. ರಸ್ತೆ (ಬಿಗ್ ಕಿಡ್ಸ್ ಕ್ಯಾಂಪ್ ಸಮೀಪ) ಟ್ರಿನಿಟಿ ವೃತ್ತ.
ಬೆಳಿಗ್ಗೆ 10 ರಿಂದ ಸಂಜೆ 6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT