ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಟಿಂಗ್‌ ಸಂಸ್ಥೆ ನಿಯಂತ್ರಣ: ಸಂಪುಟ ಒಪ್ಪಿಗೆ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಟಿವಿ ವಾಹಿನಿಗಳ ವೀಕ್ಷಕರ ಪ್ರಮಾಣ ನಿರ್ಣಯ­ವನ್ನು (ರೇಟಿಂಗ್‌–ಟಿಆರ್‌ಪಿ) ವ್ಯವಸ್ಥಿತಗೊಳಿಸು ವುದಕ್ಕಾಗಿ ಬಹು­ಕಾಲ­ದಿಂದ ಬಾಕಿ ಉಳಿದಿದ್ದ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಗುರುವಾರ  ಅಂಗೀಕಾರ ನೀಡಿದೆ.

ಸಂಪುಟ ಒಪ್ಪಿಗೆ ನೀಡಿರುವ ‘ಟಿವಿ ವಾಹಿನಿಗಳ ರೇಟಿಂಗ್‌ ಸಂಸ್ಥೆಗಳ ಸಮಗ್ರ ನಿಯಂತ್ರಣ ಚೌಕಟ್ಟು ಮತ್ತು ಮಾರ್ಗದರ್ಶಿ ಸೂತ್ರ’ವು ರೇಟಿಂಗ್‌ಗೆ ಸಂಬಂಧಿಸಿದ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ.

ರೇಟಿಂಗ್‌ ಸಂಸ್ಥೆಗಳ ನೋಂದಣಿ, ಅರ್ಹತೆ ನಿಯಮಗಳು, ನೋಂದಣಿಯ ನಿಯಮಗಳು, ಪ್ರೇಕ್ಷಕರ ಸಂಖ್ಯೆ ಮಾಪನ ವಿಧಾನಗಳು, ದೂರು ನಿರ್ವ­ಹಣೆ ವ್ಯವಸ್ಥೆ, ರೇಟಿಂಗ್‌ಗಳ ಮಾರಾಟ ಮತ್ತು ಬಳಕೆ, ಲೆಕ್ಕ ಪರಿಶೋಧನೆ, ಮಾಹಿತಿ ಬಹಿರಂಗಪಡಿಸುವಿಕೆ, ವರದಿ ಸಲ್ಲಿಕೆ ಮತ್ತು ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ವಿರುದ್ಧ ಕ್ರಮಗಳು ಸೇರಿದಂತೆ ಎಲ್ಲ ಅಂಶಗಳನ್ನೂ ಈ ಚೌಕಟ್ಟು ಒಳಗೊಂಡಿದೆ.

ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಯುಕ್ತ ಅವಧಿಯ ನೋಟಿಸ್‌ ನೀಡಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯ ರೇಟಿಂಗ್‌ ಸಂಸ್ಥೆಯ ಪರಿಶೀಲನೆ ನಡೆಸಬಹುದಾಗಿದೆ.

ಟ್ರಾಯ್‌ ಸಲ್ಲಿಸಿದ ಶಿಫಾರಸು ಆಧಾರದಲ್ಲಿ ಈ ಪ್ರಸ್ತಾಪವನ್ನು ಸಿದ್ಧಪ­ಡಿ­ಸಲಾಗಿದೆ. ಟಿವಿ ವಾಹಿನಿಗಳ ಪ್ರೇಕ್ಷಕರ ಪ್ರಮಾಣವನ್ನು ಅಂದಾಜಿಸುವ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುವುದು ಇದರ ಉದ್ದೇಶವಾಗಿದೆ.

ರೇಟಿಂಗ್‌ ವ್ಯವಸ್ಥೆಯಲ್ಲಿ ಪಾರ­ದರ್ಶಕತೆ ತರುವುದಕ್ಕಾಗಿ ಇಂತಹ ಚೌಕಟ್ಟಿನ ಅಗತ್ಯ ಬಹಳ ಕಾಲದಿಂದ ಇತ್ತು ಎಂದು ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್‌ ತಿವಾರಿ ಹೇಳಿದ್ದಾರೆ. ಅಂತರ ಸಚಿವಾಲಯ ಗುಂಪಿನ ಜತೆ ವ್ಯಾಪಕವಾದ ಸಮಾಲೋಚನೆ ಮತ್ತು ಚರ್ಚೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿವಾರಿ ತಿಳಿಸಿದ್ದಾರೆ. 

ಈಗ ಇರುವ ರೇಟಿಂಗ್‌ ವ್ಯವಸ್ಥೆ ಹಲವು ಲೋಪಗಳಿಂದ ಕೂಡಿದೆ. ಹಾಗಾಗಿ ರೇಟಿಂಗ್‌ ವ್ಯವಸ್ಥೆಯನ್ನು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಉತ್ತರದಾಯಿಯನ್ನಾಗಿ ಮಾಡು­ವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೇಟಿಂಗ್‌ ವ್ಯವಸ್ಥೆಯನ್ನು ಸರ್ಕಾರ, ಪ್ರಸಾರ ವಾಹಿನಿ­ಗಳು, ಜಾಹೀರಾತುದಾರರು, ಜಾಹೀರಾತು ಸಂಸ್ಥೆಗಳು, ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ಉತ್ತರ­ದಾ­ಯಿ­ಯಾಗುವಂತೆ ರೂಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT