ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಣುಕಾಚಾರ್ಯ ವಿರುದ್ಧ ಗುತ್ತಿಗೆದಾರ ದೂರು

Last Updated 10 ಫೆಬ್ರುವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: `ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ~ ಎಂದು ಆರೋಪಿಸಿ ರೈಲ್ವೆ ಕಾಮಗಾರಿಗಳ ಗುತ್ತಿಗೆದಾರ ಲಿಂಗರಾಜು ಎಂಬುವರು ಯಶವಂತಪುರ ರೈಲು ನಿಲ್ದಾಣ ಠಾಣೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

`ಹೊನ್ನಾಳಿ ಸಮೀಪದ ರೈಲು ನಿಲ್ದಾಣವೊಂದರ ಕಾಮಗಾರಿಯ ಗುತ್ತಿಗೆಗೆ ನಾನು ಅರ್ಜಿ ಹಾಕಿದ್ದೆ. ಆ ಸಂಬಂಧ ನನ್ನ ಮೊಬೈಲ್ ಫೋನ್‌ಗೆ ಫೆ.7ರಂದು ಕರೆ ಮಾಡಿದ್ದ ಸಚಿವ ರೇಣುಕಾಚಾರ್ಯ ಅವರು ಟೆಂಡರ್ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಬೆದರಿಕೆ ಹಾಕಿದರು~ ಎಂದು ದೂರಿನಲ್ಲಿ ತಿಳಿಸಲಾಗಿದೆ.

`ರಾಜ್ಯದ ವಿವಿಧೆಡೆ ನಾನು ಕೈಗೊಂಡಿರುವ ರೈಲ್ವೆ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ರೇಣುಕಾಚಾರ್ಯ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೇ ಕಾಮಗಾರಿಯ ಗುತ್ತಿಗೆ ರದ್ದುಪಡಿಸಲು ಶಿಫಾರಸು ಮಾಡುುದಾಗಿಯೂ ಬೆದರಿಕೆ ಹಾಕಿದರು~ ಎಂದು ದೂರಿನಲ್ಲಿ ವಿವರಿಸಲಾಗಿದೆ.

`ಲಿಂಗರಾಜು ಅವರ ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ದೂರುದಾರರು ಮತ್ತು ರೇಣುಕಾಚಾರ್ಯ ಅವರ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕರೆಗಳ ಮಾಹಿತಿ ಲಭ್ಯವಾದ ನಂತರ ತನಿಖೆ ನಡೆಸಿ ದೂರು ದಾಖಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ~ ಎಂದು ಬೆಂಗಳೂರು ರೈಲ್ವೆ ಉಪ ವಿಭಾಗದ ಡಿವೈಎಸ್ಪಿ ಮೀರ್ ಆರಿಫ್ ಅಲಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT