ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್ ಪ್ರಿಯ ಕ್ರಿಕೆಟಿಗನಿಗೆ ಗೌರವ...

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗ್ರೇಟರ್ ನೋಯಿಡಾ (ಪಿಟಿಐ): ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ರೇಸ್ ಬಗ್ಗೆ ಇರುವ ತಮ್ಮ ಅಭಿಮಾನವನ್ನು ಭಾನುವಾರ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಅಭಿವ್ಯಕ್ತಗೊಳಿಸಿದರು.  

ರೇಸ್ ಕೊನೆಗೊಳ್ಳುವ ಸಂದರ್ಭ ಬಾವುಟ ಬೀಸುವ ಗೌರವ ಸಚಿನ್‌ಗೆ ಲಭಿಸಿತು. ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟೆಲ್ ಮೊದಲಿಗರಾಗಿ ರೇಸ್ ಪೂರ್ಣಗೊಳಿಸುವ ವೇಳೆ ತೆಂಡೂಲ್ಕರ್ `ಚೆಕ್ವರ್ಡ್ ಬಾವುಟ~ ಬೀಸಿದರು. 

 ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್‌ನಲ್ಲಿ ನಡೆದ ದೇಶದ ಮೊಟ್ಟಮೊದಲ ಫಾರ್ಮುಲಾ ಒನ್ ರೇಸ್‌ನಲ್ಲಿ ಈ ಗೌರವ ಸಚಿನ್‌ಗೆ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಪತ್ನಿ ಅಂಜಲಿ ಹಾಗೂ ಮಗಳು ಸಾರಾ ಜೊತೆ ಸಚಿನ್ ರೇಸ್ ಆರಂಭಕ್ಕೆ 3 ಗಂಟೆ ಮುಂಚಿತವಾಗಿಯೇ ಬುದ್ಧ ಸರ್ಕೀಟ್‌ಗೆ ಆಗಮಿಸಿದರು.

`ಚೆಕ್ವರ್ಡ್ ಬಾವುಟ ಬೀಸುವ ಅವಕಾಶ ಲಭಿಸಿದ್ದು ಅದ್ಭುತ ಅನುಭವ. ಅದನ್ನು ಮರೆಯಲು ಸಾಧ್ಯವಿಲ್ಲ~ ಎಂದು ಸಚಿನ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT