ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ- ಗ್ರಾಹಕ ಜಂಟಿ ವೇದಿಕೆ: ಸುಪ್ರೀಂಕೋರ್ಟಿಗೆ ರೈತನ ಮೊರೆ

Last Updated 23 ಜನವರಿ 2011, 9:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಹೆಚ್ಚುತ್ತಿರುವಂತೆಯೇ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿರುವ ಅರ್ಜಿಯೊಂದು ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ರೈತರಿಗೆ ಖಚಿತ ನ್ಯಾಯೋಚಿತ ಬೆಲೆ ಸಿಗುವಂತೆ ಮಾಡಲು ~ರೈತರು ಮತ್ತು ಅಂತಿಮ ಗ್ರಾಹಕರ~ ಜಂಟಿ ವೇದಿಕೆ ರಚಿಸಬೇಕೆಂಬ ಕೋರಿಕೆಯನ್ನು ಮುಂದಿಟ್ಟಿದೆ.

ಉತ್ತರ ಪ್ರದೇಶದ ರೈತ ಭಗತ್ ರಾಮ್ ಮಿಶ್ರ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿ ಕೇಂದ್ರ ಸರ್ಕಾರ ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವಲ್ಲಿ ವಿಫಲವಾಗಿವೆ ಎಂದು ಆಪಾದಿಸಿದ್ದಾರೆ.

ಕೃಷಿಗೆ ಬೇಕಾದ ಒಳಸುರಿಗಳ ವೆಚ್ಚ ಮತ್ತು ಸಾಗಣೆ ವೆಚ್ಚ ಅಪಾರವಾಗಿ ಏರಿದ್ದರೂ ಇದಕ್ಕೆ ಅನುಗುಣವಾಗಿ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಿಲ್ಲ ಎಂಬುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಸೂಕ್ತವಾದ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗದೇ ಇರುವ ಪರಿಣಾಮವಾಗಿ ರೈತರು ಮಧ್ಯವರ್ತಿಗಳು ಮತ್ತು ಏಜೆಂಟರಿಗೆ ಅವರು ನಿಗದಿ ಪಡಿಸುವ ಅತ್ಯಂತ ಕಳಪೆ ದರದಲ್ಲಿ ತಮ್ಮ  ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ದುಃಸ್ಥಿತಿ ಬಂದು ಒದಗಿದೆ ಎಂದು ಭಗತ್ ರಾಮ್ ಮಿಶ್ರ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT