ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದ ರಾಜ್ಯ ಸಮಾವೇಶ 21ರಂದು

Last Updated 5 ಜುಲೈ 2012, 6:25 IST
ಅಕ್ಷರ ಗಾತ್ರ

ಗೋಕಾಕ: ಕೃಷಿಕರ  ಹಿತವನ್ನು ಕಾಪಾಡುವಲ್ಲಿ ರಾಜಕೀಯ ಪಕ್ಷಗಳು ಸಂಪೂರ್ಣ ವೈಫಲ್ಯತೆಯನ್ನು ಕಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ಯಲ್ಲಿ ರೈತ ಸಂಘದ ನಿಲುವು ಕುರಿತು ಚರ್ಚಿಸಲು ಇದೇ 21ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ರೈತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
 ರಾಜಕೀಯ ಪಕ್ಷಗಳು ಕೃಷಿ ಮತ್ತು ಕೃಷಿಕರ ಕುರಿತು ಅನುಸರಿಸುತ್ತಿರುವ ಧೋರಣೆಯಿಂದ ಕೃಷಿಕರು ಭ್ರಮನಿರಸ ನಗೊಂಡಿದ್ದಾರೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಎದುರಾಗುವ ಚುನಾವಣೆ ಗಳಲ್ಲಿ ಯಾರನ್ನು ಬೆಂಬಲಿಸ ಬೇಕು ಇಲ್ಲವೇ ಸ್ವಂತ ಪಕ್ಷ ಸ್ಥಾಪನೆ ಮಾಡಬೇಕೇ ಎಂಬ ಕುರಿತು ಸಮಾವೇಶ ದಲ್ಲಿ ನಿರ್ಧರಿಸಲಾಗುವುದು ಎಂದರು.

ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮತ್ತೆ ಮರುಜೀವ ನೀಡಿ, ರೈತ ಪರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆಯೂ  ನಡೆದಿದೆ ಎಂದು ಹೇಳುವ ಮೂಲಕ ರೈತ ಸಂಘಟನೆ ರಾಜಕೀಯಕ್ಕೆ ಧುಮ್ಮಿಕ್ಕುವ ಸೂಚನೆ ಗಳನ್ನು ನೀಡಿದರು. ರಾಜ್ಯ ಭೀಕರ ಬರಗಾಲದ ಹೊಸ್ತಿಲಲ್ಲಿ ನಿಂತು ಕೊಂಡಿದ್ದರೂ ಭಾರತೀಯ ಜನತಾ ಪಕ್ಷದ ಸರ್ಕಾರ ಕೇವಲ ಅಧಿಕಾರಕ್ಕಾಗಿ ಕಚ್ಚಾಟ ನಡೆಸುವ ಮೂಲಕ ತನ್ನ ರೈತ ವಿರೋಧಿ ನಿಲುವನ್ನು ಬಹಿರಂಗ ಪಡಿಸಿದೆ ಎಂದು ಕುಟುಕಿದರು.

ಕೃಷಿಕರ ಕುರಿತು  ಕಾಳಜಿ ಇಲ್ಲದ  ಸರ್ಕಾರ ಕಾಟಾಚಾರದ ಯೋಜನೆ ಗಳನ್ನು ಜಾರಿಗೆ ತಂದು  ಮೊಸಳೆ ಕಣ್ಣೀರು ಸುರಿಸುತ್ತಿದೆ. ಅತಿವೃಷ್ಠಿ ಹಾಗೂ ಅನಾವೃಷ್ಠಿ ಎದುರಾದಾಗ ಅದನ್ನು ಎದುರಿಸುವ ಸಂಬಂಧ  ಸರ್ಕಾರ ಶಾಶ್ವತ ನೈಸರ್ಗಿಕ ವಿಕೋಪ ನಿಧಿ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.

ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ರಾಜ್ಯಪಾಲರು ನಿರ್ದಾಕ್ಷೀ ಣ್ಯವಿಲ್ಲದೇ ಸರ್ಕಾರವನ್ನು ವಜಾ ಗೊಳಿಸಿ, ವಿಧಾನಸಭೆಯನ್ನು ವಿಸರ್ಜನೆ ಗೊಳಿಸುವಂತೆ ಒತ್ತಾಯಿಸಿ ದರು. 

ರಾಜ್ಯ ಉಪಾಧ್ಯಕ್ಷ ಶಿವನಗೌಡ ಗೌಡರ, ತಾಲ್ಲೂಕು ಘಟಕದ ಅಧ್ಯಕ್ಷ  ನಿಂಗಪ್ಪ ಹೊನಕುಪ್ಪಿ, ಶಿವಪುತ್ರಪ್ಪ ಜಕಬಾಳ, ಸೂರ್ಯಕಾಂತ ಮುಚ್ಚಂಡಿ ಹಿರೇಮಠ ಉಪಸ್ಥಿತರಿದ್ದರು.

ಗ್ರಾಹಕರ ಸಭೆ
ಗೋಕಾಕ: ತಾಲ್ಲೂಕಿನ ಮನ್ನಿಕೇರಿಯಲ್ಲಿ ಕೌಜಲಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಗ್ರಾಮಸಭೆ  ಇತ್ತೀಚೆಗೆ  ಜರುಗಿತು.

ಬ್ಯಾಂಕ್ ವ್ಯವಸ್ಥಾಪಕ ಎ.ಎಸ್.ವೀರಭದ್ರನ್ನವರ ಮಾತನಾಡಿ, ಠೇವಣಿ ಹಾಗೂ ಸಾಲ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

ದುಂಡಪ್ಪ ಗೋಡಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಪೂಜೇರಿ,  ಮಹಾಂತೇಶ ಕರಿಗೌಡರ,  ಸತ್ತೆಪ್ಪ  ಗಡಾದ ಮತ್ತು ವೇಮನಗೌಡ ಗೌಡರ ಉಪಸ್ಥಿತರಿದ್ದರು. ಆರ್.ಎಸ್. ದೇಶಪಾಂಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT