ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಮುದಾಯದ ನೆರವಿಗೆ ಧಾವಿಸಲು ಮನವಿ

Last Updated 22 ಅಕ್ಟೋಬರ್ 2012, 7:45 IST
ಅಕ್ಷರ ಗಾತ್ರ

ಹಿರೇಕೆರೂರ: ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ರೈತರು ಆಸಕ್ತಿ ಯಿಂದ ಭಾಗವಹಿಸಿ ಹೆಚ್ಚಿನ ಮಾಹಿತಿ ತಿಳಿದುಕೊಂಡು ಸರ್ಕಾರ ಸವಲತ್ತು ಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ರೈತಪರ ಚಿಂತನೆಯನ್ನು ಮಾಡುವ ಮೂಲಕ ಬರಗಾಲದಿಂದ ಸಂಕಷ್ಟದಲ್ಲಿ ರುವ ರೈತ ಸಮುದಾಯದ ನೆರವಿಗೆ ಧಾವಿಸಬೇಕು ಎಂದು ತಾ.ಪಂ. ಸದಸ್ಯ ಚಂದ್ರು ಅಣ್ಣಪ್ಪನವರ ಅವರು ಹೇಳಿದರು.

ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಕೃಷಿ ಸಂಬಂಧಿತ ಇಲಾಖೆಗಳ ಏಕ ಗವಾಕ್ಷಿ ವಿಸ್ತರಣಾ ಪದ್ಧತಿ ಕೃಷಿ ಉತ್ಸವ ಯೋಜನೆ ಅಡಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹೋಬಳಿ ಮಟ್ಟದ ಮಾಹಿತಿ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಹಂಚಿಕೆಯಲ್ಲಿನ ಅನಿಶ್ಚಿತತೆ ಪರಿಣಾಮ ಖುಷ್ಕಿ ಬೇಸಾಯದ ಬೆಳೆ ಉತ್ಪಾದನೆಯಲ್ಲಿ ವ್ಯತ್ಯಾಸ ಉಂಟಾ ಗುತ್ತಿದೆ. ಮಳೆ ನೀರನ್ನು ಬಿದ್ದ ಸ್ಥಳ ದಲ್ಲಿಯೇ ಹಿಡಿದಿಟ್ಟುಕೊಂಡು ತೇವಾಂಶ ಕಾಪಾಡಿಕೊಂಡು ಬೆಳೆ ಉತ್ಪಾದನೆಯಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಬೇಕು ಎಂದರು.

ಸರ್ವಜ್ಞ ಸಾವಯವ ಕೃಷಿ ಮಿಶನ್ ಅಧ್ಯಕ್ಷ ಸೋಮಶೇಖರಪ್ಪ ಚಪ್ಪರದ ಹಳ್ಳಿ ಮಾತನಾಡಿ, ರೈತರು ಹಳೆಯ ಕೃಷಿ ಪದ್ಧತಿಯಲ್ಲಿ ಕೆಲ ಮಾರ್ಪಾಡು ಮಾಡಿಕೊಳ್ಳುವ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಕ್ರಿಮಿನಾಶಕ ಹಾಗೂ ರಾಸಾಯನಿಕ ಗೊಬ್ಬರವನ್ನು ಬಳಸುವ ಮೂಲಕ ಕೃಷಿಯಲ್ಲಿ ಪ್ರಗತಿ ಕಾಣಬೇಕು.
ರೈತರು ಕೃಷಿ ಕ್ಷೇತ್ರದಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುವ ಮೂಲಕ ದೇಶಕ್ಕೆ ಹೆಚ್ಚಿನ ಆಹಾರ ಭದ್ರತೆಯನ್ನು ಒದಗಿಸುವುದರೊಂದಿಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸ ಬೇಕು ಎಂದು ಹೇಳಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡರ ಕಾರ್ಯಕ್ರಮ ಉದ್ಘಾಟಿಸಿದರು.
ಸಹಾಯಕ ಕೃಷಿ ನಿರ್ದೇಶಕ ಪಿ. ಸೇವಾನಾಯ್ಕ, ಗ್ರಾ.ಪಂ. ಅಧ್ಯಕ್ಷರಾದ ಅಶೋಕ ಚನ್ನಗೌಡ್ರ, ಬಸಪ್ಪ ಲಮಕಿಹಾಳ, ಮಹೇಶ ಮಾನಿಬಣಕಾರ, ಚಂದ್ರಗೌಡ ಬಣಕಾರ, ಮೃತ್ಯುಂಜಯ ವಾಲಿ, ಭೀಮನಗೌಡ ಬಿರಾದಾರ, ನಾಗರಾಜ ಹಂಚಿನಮನಿ, ಉಳಿವೆಪ್ಪ ಹುಚ ಗೊಂಡ್ರ, ಮಹೇಶ ಕೊಟ್ಟೂರ, ಮಹೇಶ ದೊಡ್ಡಮನಿ, ನಾಗಪ್ಪ ರಾಗೇರ, ಎ.ಡಿ.ಮುಲ್ಲಾ ಮೊದಲಾ ದವರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಅನ್ನಪೂರ್ಣ ಪಾಟೀಲ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT