ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಕನಸಿಗೆ ತಣ್ಣೀರೆರಚಿದ ಅತಿವೃಷ್ಟಿ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೀದರ್: ದಕ್ಷಿಣ ಕರ್ನಾಟಕ ಭಾಗದ ವರ ದೃಷ್ಟಿಯಲ್ಲಿ ಬಿಸಿಲ ನಾಡು ಎಂಬ ಚಿತ್ರಣವನ್ನು ಮೂಡಿಸುವ ಉತ್ತರ ಗಡಿಯ ಬೀದರ್ ಜಿಲ್ಲೆಯಲ್ಲಿ ಕಳೆದೆ ರಡು ವರ್ಷದಿಂದ ಅದಕ್ಕೆ ವ್ಯತಿರಿಕ್ತವಾದ ಚಿತ್ರಣವಿದೆ. ಕಳೆದ  ವರ್ಷ ಇತರ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಮಳೆ ಬಿದ್ದು ಉತ್ತಮ ಫಸಲು ಬಂದಿದ್ದರೆ, ಈ ವರ್ಷ ನಿರೀಕ್ಷೆಯನ್ನು ಮೀರಿ ಮಳೆಯಾಗಿದೆ. ಆದರೆ, ಫಸಲು ಕೈ ಕೊಟ್ಟಿದೆ!

ಮಳೆಯ ಕೊರತೆಯಿಂದಾಗಿ ಜಿಲ್ಲೆ ಯಲ್ಲಿ ಬರದ ಚಿತ್ರಣವೇನೂ ಇಲ್ಲ. ಹಾಗೆಂದೂ ರೈತಾಪಿ ವರ್ಗ ಸಂತಸ ದಿಂ ದಲೂ ಇಲ್ಲ. ಏಕೆಂದರೆ, ಮುಂಗಾರು ಹಂಗಾಮಿನಲ್ಲಿ ಬೆಳೆ ಒಂದು ಹದಕ್ಕೆ ಬೆಳೆದಿದ್ದ ಅವಧಿಯಲ್ಲಿ ಜುಲೈ ತಿಂಗಳು ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಇದರಿಂದ ಉತ್ತಮ ಫಸಲು ಮತ್ತು  ಹೆಚ್ಚಿನ ಲಾಭವನ್ನು ಪಡೆಯುವ ರೈತನ ಕನಸು ಭಗ್ನವಾಗಿದೆ. ಲಾಭದ ಆಸೆಯೂ ಕಮರಿದೆ.

ಸುರಿದ  ಅಧಿಕ ಮಳೆಯಿಂದಾಗಿ ಹೊಲ, ಗದ್ದೆಗಳಲ್ಲಿ ನಿಂತ ನೀರು ಬೆಳೆಯ ಮೇಲೆ ನಕಾರಾತ್ಮಕ ಪರಿ ಣಾಮ ಬೀರಿದೆ. ಕೃಷಿ ಇಲಾಖೆಯ ಪ್ರಾಥಮಿಕ ಸಮೀಕ್ಷೆಯ ಅನುಸಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿ ನಲ್ಲಿ ಒಟ್ಟು 20,033 ಹೆಕ್ಟೇರ್್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ.

ಪ್ರಸಕ್ತ ವರ್ಷ ಮುಂಗಾರು ಹಂಗಾ ಮಿನಲ್ಲಿ ಒಟ್ಟು 2.13 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇದ್ದು, ಈ ಪೈಕಿ 1.78 ಲಕ್ಷ ಭೂಮಿಯಲ್ಲಿ ಬಿತ್ತನೆ ಚಟುವವಟಿಕೆ ಇತ್ತು. ತೊಗರಿ, ಉದ್ದು, ಹೆಸರು ಜಿಲ್ಲೆಯ  ಪ್ರಮುಖ  ಬೆಳೆಗ ಳಾಗಿದ್ದು,ಇದರ ಜೊತೆಗೆ ಗಣನೀ ಯವಾದ ಪ್ರದೇಶದಲ್ಲಿ ಜೋಳ ಮತ್ತು ಭತ್ತದ ಬಿತ್ತನೆಯೂ ಆಗಿದೆ.

ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಶುರುವಾಗಿದ್ದು, ಆರಂಭ ದಲ್ಲಿಯೇ ಬಿತ್ತನೆ ಕಾರ್ಯ ಕೈಗೊಂಡಿದ್ದ ರೈತರು ಹೆಸರು, ಉದ್ದು ಫಸಲು ಪಡೆದಿ ದ್ದಾರೆ. ತಡವಾಗಿ ಬಿತ್ತನೆ ಮಾಡಿದ ಬಹುಪಾಲು ರೈತರಿಗೆ ಪ್ರಮುಖ ಬೆಳೆ ಗಳಾದ ಉದ್ದು, ಹೆಸರು ಕೈಗೆ ಬಂದಿಲ್ಲ.
ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಪುಥ್ರಾ ಅವರ ಪ್ರಕಾರ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ಮತ್ತು ಹುಮನಾಬಾದ್ ತಾಲ್ಲೂಕುಗಳನ್ನು ಹೊರತುಪಡಿಸಿ ಉಳಿದ ಮೂರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದೆ. ಭೂಮಿಯಲ್ಲಿ ಸಮತಟ್ಟು, ತಗ್ಗು ಇರುವೆಡೆ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವುದು, ನಿರಂತರ ಮಳೆ ಇದಕ್ಕೆ ಕಾರಣ’.

ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯು ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ಪ್ರಕಾರ ಉದ್ದು, ತೊಗರಿ, ಹೆಸರುಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಿದ್ದರೆ; ಸೋಯಾಬೀನ್ ಚೇತರಿಸಿಕೊಳ್ಳುತ್ತಿದೆ. ಬೀದರ್, ಭಾಲ್ಕಿ  ಮತ್ತು  ಔರಾದ್ ತಾಲ್ಲೂಕಿನಲ್ಲಿ ಬೆಳೆ ಹಾನಿ ಪ್ರಮಾಣ ಹೆಚ್ಚಾಗಿದೆ.

ಒಂದು ಕಡೆ ಬೆಳೆ ಹಾನಿಯಾದ ಹೊಡೆತ  ಇದ್ದರೆ ಇನ್ನೊಂದು ಕಡೆ  ಆರ್ಥಿಕವಾಗಿ ಕೈಹಿಡಿಯುತ್ತಿದ್ದ ತರಕಾರಿ, ಸೊಪ್ಪು ಕೂಡಾ ಕೈಕೊಟ್ಟಿದ್ದು, ರೈತರು ಭ್ರಮನಿ ರಸನ ಗೊಂಡಿದ್ದಾರೆ. ಬೀದರ್್ ತಾಲ್ಲೂಕು ಮಾಮನಕೆರೆಯ ಕೃಷಿಕ ಬಸವರಾಜ ತಿಪ್ಪನೋರ್ ಅವರು, ‘ಚವಳೆಕಾಯಿ (ಗೋರಿಕಾಯಿ) ಮತ್ತು ಕೆಲವೊಂದು ಸೊಪ್ಪು ಬೆಳೆದಿದ್ದೆವು. ಮಳೆ ಹೆಚ್ಚಾಗಿ ಅದೂ ಹೋಯಿತು’ ಎನ್ನುತ್ತಾರೆ.
ಕೃಷಿಕರು ಆಗಿರುವ ಎಪಿಎಂಸಿ ಮಾಜಿ ನಿರ್ದೇಶಕ ರವೀಂದ್ರ ಸಿದ್ದಾಪುರ ಅವರು, ‘ಬೀದರ್ ತಾಲ್ಲೂಕಿನಲ್ಲಿ ಹೆಸರು, ಉದ್ದು, ಎರಡು ಬೆಳೆ ಹೋಗಿದೆ. ಜುಲೈನಲ್ಲಿ ಮಳೆಹೆಚ್ಚಾಗಿ ಎಲ್ಲವೂ ಹಳಸಿತು’ ಎಂದು ಪ್ರತಿಕ್ರಿಯಿಸುತ್ತಾರೆ.

ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಪ್ರಮಾಣ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕೈಗೊಂಡ ಪ್ರಥಮ ಭೇಟಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ವ್ಯಕ್ತವಾಯಿತು.

‘ಜಂಟಿ ಸಮೀಕ್ಷೆ  ನಡೆಸಬೇಕು. ಆದಷ್ಟು ಕೂಡಲೇ ರೈತರಿಗೆ ನಿಯಮಾನುಸಾರ ಪರಿಹಾರ ವಿತರಿಸಬೇಕು’ ಎಂದು ಅವರು ಸೂಚಿಸಿದ್ದರು.

ಆದಾದ ನಂತರ ಸಚಿವೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಂಟಿ ಸಮೀಕ್ಷೆ ನಡೆದು ನಷ್ಟದ ಅಂದಾಜು ಅರಿವಾಗಿದ್ದರೂ ರೈತರಿಗೆ ಪರಿಹಾರ ಒದಗಿಸುವ ಪ್ರಕ್ರಿಯೆ ಆರಂಭವಾಗಿಲ್ಲ.

‘ಹೈರಾಣಾಗೇದಿರಿ’

‘ತೋಲ್ ಮಳಿ ಬಂದು ಎಲ್ಲ ಹೈರಾ ಣಾಗೇದಿರಿ. ಹೆಸರು, ಉದ್ದು ಹಾಕಿದ್ದೋ. ಎಲ್ಲ ಹಳಸಿತು. ಈಗ ಸೊಪ್ಪು, ಪಲ್ಯೆ ಹಚ್ಚೀವ್ರಿ’.
ಬಸವರಾಜು ತಿಪ್ಪನೋರ್, ಮಾಮನಕೆರೆ, ಬೀದರ್ ತಾಲ್ಲೂಕು.







‘ಏನು ಮಾಡಬೇಕೋ ತಿಳಿಯುತ್ತಿಲ್ಲ’
‘ಕಳೆದ ವರ್ಷ ಎಕರೆ ಒಣ ಭೂಮಿಯಲ್ಲಿ ಎಂಟು ಕ್ವಿಂಟಲ್ ಸೋಯಾ ಬೆಳೆದಿದ್ದೆ. ಈ ವರ್ಷ ಮಳೆ ಹಾಳಾಗಿದೆ. ಪೂರ್ಣ ಮುಂಗಾರು ಬೆಳೆಯನ್ನೇ ನಂಬಿರುವ ನಮಗೆ ಈಗ ಬೆಳೆ ಹಾನಿಯಿಂದ ಏನು ಮಾಡಬೇಕೋ ತಿಳಿಯುತ್ತಿಲ್ಲ’.
–ಮನೋಹರ ಮೋಗಲಪ್ಪ ಮೇತ್ರೆ,
ಸುಂದಾಳ ಗ್ರಾಮ, ಔರಾದ್ ತಾಲ್ಲೂಕು.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT