ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಹತ್ಯೆ ಖಂಡಿಸಿ ಶಾಂತಿಯುತ ಬಂದ್

Last Updated 19 ನವೆಂಬರ್ 2011, 5:30 IST
ಅಕ್ಷರ ಗಾತ್ರ

ಕಲಘಟಗಿ: ಪಟ್ಟಣದ ಪ್ರಗತಿಪರ ರೈತ ಮಹದೇವಪ್ಪ ಬಳಿಗೇರ ಅವರ ಹತ್ಯೆಯನ್ನು ಖಂಡಿಸಿ, ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಕಲಘಟಗಿ ಬಂದ್ ಶಾಂತಿಯುತವಾಗಿ ಜರುಗಿತು.ಪಟ್ಟಣದ ನಾಗರಿಕರು, ಸ್ವಯಂಪ್ರೇರಿ ತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸಿದರು.

ಈ ನಡುವೆ ರಾಜ್ಯ ರೈತ ಸಂಘ, ಜಿಲ್ಲಾ ಕಬ್ಬು ಬೆಳೆಗಾರರ ಸಂಘ ಹಾಗೂ ವಿದ್ಯುತ್ ಪಂಪ್‌ಸೆಟ್ ಬಳಕೆದಾರರ ಸಂಘಗಳ ಪ್ರತಿನಿಧಿಗಳು ಮತ್ತು ತಾಲ್ಲೂ ಕಿನ ಸಾವಿರಾರು ರೈತರು ಪಟ್ಟಣದ ಪೇಟೆ ಬೀದಿಯಲ್ಲಿನ ಚೌತಮನೆ ಕಟ್ಟೆಯ ಬಳಿ ಸಭೆ ಸೇರಿ, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಹುಬ್ಬಳ್ಳಿ- ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಮಿಕ್ಕಿ ರಸ್ತೆ ತಡೆ ನಡೆಸಿದರು.ರಾಜ್ಯ ರೈತ ಸಂಘದ ಬಿ.ಸಿ.ಪಾಟೀಲ, ಕಬ್ಬು ಬೆಳೆಗಾರರ ಸಂಘದ ನಿಜಗುಣಿ ಕೆಲಗೇರಿ, ರಾಜಶೇಖರ ಮೆಣಸಿನ ಕಾಯಿ, ರೈತ ಪ್ರಮುಖ ಸಂಕಪ್ಪ ಬನಮಣ್ಣವರ ಮೊದಲಾದವರು ಮಾತನಾಡಿ, ರೈತಹತ್ಯೆಯನ್ನು ಯಾವುದೇ ಸಂದರ್ಭದಲ್ಲಿಯೂ ಹಗುರ ವಾಗಿ ಕಾಣಬಾರದು. ಈ ಹತ್ಯೆ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದರು.

ಅಲ್ಲದೇ ಪ್ರಕರಣದ ತನಿಖೆಯನ್ನು ಸಿ.ಓ.ಡಿ.ಗೆ ವಹಿಸುವಂತೆ ಆಗ್ರಹಿಸ ಲಾಯಿತು. ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಿದ ಮನವಿಯನ್ನು ತಾಲ್ಲೂಕು ದಂಡಾಧಿ ಕಾರಿಗಳಿಗೆ ಈ ಸಂದರ್ಭದಲ್ಲಿ ಸಲ್ಲಿಸ ಲಾಯಿತು.

ಸರಕಾರದ ಪರವಾಗಿ ತಾಲ್ಲೂಕು ದಂಡಾಧಿಕಾರಿ ವಿಜಯಕುಮಾರ ಹೊನ ಕೇರಿ ಪ್ರತಿಭಟನಾ ಸ್ಥಳಕ್ಕೆ ಧಾವಿಸಿ. ಮನವಿ ಸ್ವೀಕರಿಸಿದರು.ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತಸಂಘದ ಬಿ.ಸಿ.ಪಾಟೀಲ, ನಿಜಗುಣಿ ಕೆಲಗೇರಿ,  ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಹ್ಮಕುಮಾರ ಅಳಗ ವಾಡಿ, ಸದಾನಂದ ಚಿಂತಾಮಣಿ, ಉಳು ವಪ್ಪ ಬಳಿಗೇರ, ಶಾಸಕರ ಆಪ್ತ ಕಾರ್ಯ ದರ್ಶಿ ಸೋಮಣ್ಣ ಬೆನ್ನೂರ, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಶಂಕ ರಗಿರಿ ಬಾವಾನವರ, ಎಂ.ಐ.ಕಟ್ಟಿ, ಮಂಜುನಾಥ ರೊಟ್ಟಿ ಗವಾಡ, ಮಂಜುನಾಥ ಕಾಗಲಕರ, ವೀರಣ್ಣ ಕುಬ ಸದ ಮುಂತಾದವರು ವಹಿಸಿದ್ದರು.ಡಿವೈ ಎಸ್.ಪಿ ಎ.ಬಿ.ಬಸರಿ, ಸಿಪಿಐ ಮಹಾಂತೇಶ ಜಿದ್ದಿ ನೇತೃತ್ವದಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT