ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ

Last Updated 6 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಬಿಎಂಎಂ ಇಸ್ಪಾತ್ ಕಂಪೆನಿಗೆ ರೈತರ ಜಮೀನನ್ನು ಹಸ್ತಾಂತರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ರೈತರ ಭೂಮಿಗೆ ಪಟ್ಟಾ ವಿತರಿಸುವಂತೆ ಒತ್ತಾಯಿಸಿ ಪಟ್ಟಣದ ಭೂತಾಯಿ ಹೋರಾಟ ಸಮಿತಿ ಹಮ್ಮಿಕೊಂಡ ಸರದಿ ಉಪವಾಸ ಸತ್ಯಾಗ್ರಹ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು.

ಈ ಸಂದರ್ಭದಲ್ಲಿ ಹೊಸಪೇಟೆಯ ರೈತಸಂಘದ ಅಧ್ಯಕ್ಷ ವೆಂಕಟೇಶ್, ಟಿ.ಬಿ.ಡ್ಯಾಂನ ಕರವೇ ಅಧ್ಯಕ್ಷ ಮೂರ್ತಿ, ಹನುಮಂತಪ್ಪ, ಚನ್ನಪ್ಪ ಅವರು ರೈತರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಭೂತಾಯಿ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಮಂಜುನಾಥ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಎಸ್.ಪ್ರಕಾಶ್, ಸಹ ಕಾರ್ಯದರ್ಶಿ ಕೆ.ರಘುವೀರ, ಉಪಾಧ್ಯಕ್ಷ ಗಡ್ಡಿ ಸೋಮಶೇಖರ, ಕುಂಚೂರ್ ಕಲೀಂ, ಕುಂಬಾರ ಮಂಜುನಾಥ, ಯು.ವೆಂಕಟೇಶ್, ಸೋಮಪ್ಪ, ನಾಗರಾಜ್, ಎನ್.ಡಿ.ಹನುಮಂತಪ್ಪ, ವಿಶ್ವನಾಥ, ಕಾಸಿಂ, ರೋಗಾಣಿ ಬಸಪ್ಪ, ಹುಸೇನ್, ಚಿದಾನಂದ, ದುರುಗಪ್ಪ, ಮಂಜುನಾಥ, ತಾ.ಪಂ.ಮಾಜಿ ಸದಸ್ಯ ಅಂಜಿನಪ್ಪ, ಅಂಕ್ಲೇಶ್, ಸಮಾದೆಪ್ಪ, ಚಿದಾನಂದ, ಗುಂಡಾ ಕುಮಾರಸ್ವಾಮಿ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ನಾಗೇಂದ್ರ, ವೆಂಕಟ ಸೋಮಪ್ಪ, ಖೀಮ್ಯೋನಾಯ್ಕ, ಎ.ಸೋಮಪ್ಪ, ಚಂದ್ರಪ್ಪ, ನಜೀರ್ ಅಹಮ್ಮದ್ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಸರದಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT