ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಚಿತ್ತ ಹರಿಯಲಿ ವೈಜ್ಞಾನಿಕ ಬೇಸಾಯದ್ತ

Last Updated 19 ಅಕ್ಟೋಬರ್ 2012, 9:15 IST
ಅಕ್ಷರ ಗಾತ್ರ

ಮೈಸೂರು: `ಪ್ರಾಚೀನ ಕೃಷಿ ಋಷಿಗಳಿಗೆ ತರುತ್ತಿತ್ತು ಖುಷಿ
ಈಗಿನ ಕಲಬೆರಕೆ ಕೃಷಿ ಬಳಿಯುತ್ತಿದೆ ರೈತನಿಗೆ ಮಸಿ
ಬೇಕೇ ಬೇಕು ಪ್ರಾಚೀನ-ಆಧುನಿಕ ಜ್ಞಾನದ ಕಸಿ
ಕಣ್ಣು ಬಿಡಲಿ ಪ್ರಜ್ಞಾವಂತ ರೈತರು ವಸಿ~

ನಗರದ ಕಲಾಮಂದಿರ ಸಭಾಂಗಣದಲ್ಲಿ ಗುರುವಾರ ನಡೆದ ರೈತ ದಸರಾ ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹ ದೇವಪ್ಪ ಅವರು ಮಾತನಾಡಿ, ಕೃಷಿಕರು ಅನುಸರಿಸಬೇಕಾದ ಬೇಸಾಯ ಕ್ರಮಗಳನ್ನು ಕವನಗಳ ಮೂಲಕ ಬಿಚ್ಚಿಟ್ಟರು.

ನಗರದ ಕಲಾಮಂದಿರದಲ್ಲಿ ಗುರುವಾರ ನಡೆದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಬೇಸಾಯ ಪೂರಕ ವಾತಾವರಣದಲ್ಲಿ ವಿಶ್ವಕ್ಕೆ ಭಾರತ ಮಾದರಿ, ಅದೇ ರೀತಿ ಭಾರತಕ್ಕೆ ಕರ್ನಾಟಕ ಮಾದರಿಯಾಗಿದೆ. ಅನ್ನದಾತರು ಒಕ್ಕಲುತನದಲ್ಲಿ ವೈಜ್ಞಾ ನಿಕ ವಿಧಾನ ಅನುಸರಿಸಿದರೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಂಡು ಅಧಿಕ ಇಳುವರಿ ಪಡೆಯಬಹುದಾಗಿದೆ. ಕಿರು ಧಾನ್ಯಗಳು ಸಿರಿಧಾನ್ಯಗಳಾಗಿದ್ದು ರೈತರು ಇವುಗಳತ್ತ ಚಿತ್ತ ಹರಿಸಬೇಕು. ಏಕೆಂದರೆ ಇವು ರೋಗ ಮುಕ್ತ ಬೆಳೆಗಳು ಮತ್ತು ಬಹುಕಾಲದವರೆಗೆ ಹಾಳಾಗದೇ ಉಳಿಯುವ ಗುಣ ಹೊಂದಿವೆ ಎಂದು ಸಲಹೆ ನೀಡಿದರು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿದ್ದರೂ ಕೃಷಿಯೇ ಎಲ್ಲದಕ್ಕೂ ಜೀವಾಳ. ಎಷ್ಟೆಲ್ಲ ಸಿರಿ ಸಂಪಾದಿಸಿದರೂ, ಹಣವನ್ನು ತಿನ್ನಲು ಸಾಧ್ಯವಿಲ್ಲ. ನೇಗಿಲ ಕುಳದೊಳಗೆ ಸರ್ವ ತಂತ್ರಜ್ಞಾನವೂ ಅಡಗಿದೆ ಎಂದು ವ್ಯವಸಾಯದ ಮಹತ್ವವನ್ನು ವಿವರಿಸಿದರು. 

 ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಬಿತ್ತನೆ ಬೀಜ ಬೆಳೆ ಸಮೃದ್ಧಿಯ ಮೂಲ. ಪೂರ್ವಿಕರು ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳು ತ್ತಿದ್ದರು. ಇಂದು ರೈತರು ಬಿತ್ತನೆ ಬೀಜಕ್ಕೆ ಸರ್ಕಾರವನ್ನು ಆಶ್ರಯಿಸುತ್ತಿದ್ದು, ಕೆಲವೊಮ್ಮ ಕಳಪೆ ಬೀಜ ವಿತರಣೆ ಯಿಂದಾಗಿ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ನಾಶ, ಪರಿಸರ ಮಾಲಿನ್ಯ, ಅಂತರ್ಜಲ ಕುಸಿತ, ಮಳೆ ಅಭಾವಗಳಿಂದಾಗಿ ರೈತರ ಬಾಳು ಗೋಳಾಗಿದೆ. ಭೂಮಿಯ ಫಲವತ್ತತೆ ನಾಶ, ಸಾವಯವ ಗೊಬ್ಬರ, ವೈಜ್ಞಾನಿಕ ಬೇಸಾಯ ಪದ್ಧತಿ ಮಾಹಿತಿ ಕೊರತೆ ಇತ್ಯಾದಿ ಕಾರಣಗಳಿಂದಾಗಿ ನೇಗಿಲಯೋಗಿ ಸಂಕಷ್ಟ ಅನುಭವಿಸುವಂತಾಗಿದೆ. ಶಿಕ್ಷಣದಲ್ಲಿ ಕೃಷಿಗೆ ಆದ್ಯತೆ ನೀಡಬೇಕು. ಅಲ್ಲದೇ ವಿದ್ಯಾವಂತರೂ ಒಕ್ಕಲುತನ ಅರಸಿ ಬರುವಂತೆ ಈ ಕ್ಷೇತ್ರವನ್ನು ಆಕರ್ಷಣೀಯವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತ ದಸರಾ ಉಪಮಿತಿ ಅಧ್ಯಕ್ಷ ನಾಗರಾಜ್ ಮಲ್ಲಾಡಿ  ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ 22ರಂದು ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರಿನ ಪಾರಂಪರಿಕ ಬೆಳೆಗಳ (ವಿಳ್ಯದೆಲೆ, ಮಲ್ಲಿಗೆ, ನಂಜನಗೂಡು ರಸಬಾಳೆ, ಬದನೆಕಾಯಿ, ಶ್ರೀಗಂಧ, ರೇಷ್ಮೆ ಇತ್ಯಾದಿ) ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ಸುಚಿತ್ರ, ಮೈಮುಲ್ ಅಧ್ಯಕ್ಷ ಮಹದೇವಪ್ಪ, ವ್ಯವಸ್ಥಾಪಕ ಸುರೇಶ್‌ಬಾಬು, ರೈತ ದಸರಾ ಉಪಮಿತಿಯ ಪದಾಧಿಕಾರಿಗಳಾದ ಹೂಟಗಳ್ಳಿ ದೇವರಾಜ್, ಮಂಜುನಾಥ್, ಶಿವನಂಜಪ್ಪ ಇದ್ದರು.

ರೈತ ದಸರಾ ಉಪಮಿತಿ ಕಾರ್ಯಾಧ್ಯಕ್ಷ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ ಸ್ವಾಗತಿಸಿದರು.

ಕೃಷಿ ಮಳಿಗೆಗಳ ದರ್ಬಾರು
ಕಲಾಮಂದಿರದ ಆವರಣದಲ್ಲಿ ಆಯೋಜಿಸಿರುವ ರೈತ ದಸರಾದಲ್ಲಿ ಕೃಷಿ ಮಳಿಗೆಗಳದ್ದೇ ಕಾರುಬಾರು. ಈ ರೈತ ಸ್ನೇಹಿ ಕೇಂದ್ರಗಳಲ್ಲಿ ಕೃಷಿಕರಿಗೆ ಭರಪೂರ ಮಾಹಿತಿ ಲಭ್ಯ. ಅಧುನಿಕ, ಬಹುಪಯೋಗಿ ಕೃಷಿ ಪರಿಕರಗಳ ಪ್ರದರ್ಶನ, ಮಾರಾಟವೂ ಇದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಜಲಾನಯನ, ಪಶುಪಾಲನೆ ಕಚೇರಿಯವರು ಮಳಿಗೆಗಳನ್ನು ತೆರೆದಿದ್ದು, ಇಲಾಖೆಯಿಂದ ಲಭ್ಯ ಸವಲತ್ತುಗಳ ಕುರಿತು, ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗು ತ್ತಿದೆ. ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ರಾಜ್ಯ ಬೀಜ ನಿಗಮ, ನವೀಕರಿ ಸಬಹುದಾದ ಇಂಧನ ಅಭಿವೃದ್ಧಿ ನಿಗಮ ಇತ್ಯಾದಿ ಸಂಸ್ಥೆಗಳವರು ಪ್ರಾತ್ಯಕ್ಷಿಕೆಗಳನ್ನು ತೋರಿಸಿಕೊಡು ತ್ತಿದ್ದರು. ಹನಿ, ತುಂತುರು ನೀರಾವರಿ ಸಲಕರಣೆಗಳು, ಭತ್ತ ನಾಟಿ, ಕಟಾವು ಯಂತ್ರಗಳು, ವಿವಿಧ ಕೀಟನಾಶಕ, ರಸಗೊಬ್ಬರಗಳು ಇಲ್ಲಿನ ಪ್ರದರ್ಶನಕ್ಕೆ ಇಡಲಾಗಿದೆ.

ಕೃಷಿ ಕೇತ್ರದ ಸಾಧಕರಿಗೆ ಸನ್ಮಾನ
 ಉ
ತ್ತಮ ಸಾಧನೆ ಮಾಡಿದ ಮೈಸೂರು ಜಿಲ್ಲೆಯ ಪ್ರಗತಿ ಪರ ರೈತರನ್ನು ಸನ್ಮಾನಿಲಾಯಿತು.

ಕೃಷಿ: ತೀ.ನರಸೀಪುರ ತಾಲ್ಲೂಕಿನ ಗೊರವನಹಳ್ಳಿಯ ಪಾರ್ಥಸಾರಥಿ, ತಲಕಾಡಿನ ಬಸವರಾಜು, ಹುಣಸೂರು ತಾಲ್ಲೂಕಿನ ಬಿಳಿಕೆರೆಯ ಎಚ್.ಎಸ್.ಮಹೇಶ್.

ಪಶುಸಂಗೋಪನೆ: ಪಿರಿಯಾಪಟ್ಟಣ ತಾಲ್ಲೂಕಿನ ಆವರ್ತಿಯ ಎ.ಎಸ್.ಚಂದ್ರಶೇಖರ್, ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿಯ ಜಿ.ಆರ್.ಮೋಹನ್

 ರೇಷ್ಮೆ ಕೃಷಿ: ಮೈಸೂರು ತಾಲ್ಲೂಕಿನ ಕಳಲವಾಡಿಯ ರೇಖಾ ರೋಹಿತ್, ವರಕೊಡಿನ ಸಣ್ಣಸ್ವಾಮಿ
ತೋಟಗಾರಿಕೆ: ಮೈಸೂರು ತಾಲ್ಲೂಕಿನ ಬೊಮ್ಮನ ಹಳ್ಳಿಯ ಚಿಕ್ಕಕಾಳಮ್ಮ, ಎಚ್.ಡಿ.ಕೋಟೆ ತಾಲ್ಲೂಕಿನ

ಸರಗೂರಿನ ಎಸ್.ವಿ.ವೆಂಕಟ್ಪಪ್ಪ
ಜಲಾನಯನ
: ಪಿರಿಯಾಪಟ್ಟಣ ತಾಲ್ಲೂಕಿನ ತಾಕನ ಹಳ್ಳಿಯ ಈರಯ್ಯ, ಕೆ.ಆರ್.ನಗರ ತಾಲ್ಲೂಕಿನ ಭೇರ‌್ಯ ಗ್ರಾಮದ ಹೊಂಬಯ್ಯ

ಮೀನುಗಾರಿಕೆ: ಹುಣಸೂರು ತಾಲ್ಲೂಕಿನ ಹೊಸಕೋಟೆಯ ತ್ರಿಪುರ ಸುಂದರ, ತೀ.ನರಸೀಪುರ ತಾಲ್ಲೂಕಿನ ಕಲಿಯೂರಿನ ಗೋವಿಂದ

ಯುವ ರೈತ ವಿಭಾಗ: ತೀ.ನರಸೀಪುರ ತಾಲ್ಲೂಕಿನ ತಲಕಾಡಿನ ಶ್ರೀನಿವಾಸ್, ನಂಜನಗೂಡು ತಾಲ್ಲೂಕಿನ ಸಿದ್ದಯ್ಯನಹುಂಡಿಯ ಎಸ್.ಮಂಜುನಾಥ್

ವಿಜ್ಞಾನಿಗಳು: ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಮಹದೇವಪ್ಪ ಮತ್ತು ಡಾ.ರಾಜಣ್ಣ

ಸಚಿವ ಉಮೇಶ್ ಕತ್ತಿ ಗೈರು
ರೈತ ದಸರಾ ಉದ್ಘಾಟನೆ ಬೆಳಿಗ್ಗೆ 11.30ಕ್ಕೆ ನಿಗದಿ ಯಾಗಿತ್ತು. ಕೃಷಿ ಸಚಿವ ಉಮೇಶ್ ಕತ್ತಿ  ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಸಚಿವ ಉಮೇಶ್ ಕತ್ತಿ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಕಾರ್ಯಕ್ರಮ ಒಂದೂ ಕಾಲು ಗಂಟೆ ತಡವಾಗಿ ಮಧ್ಯಾಹ್ನ 12.45ಕ್ಕೆ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT