ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ರೈತರ ನೋವು ಬಿಂಬಿಸುವ ಸಾಹಿತ್ಯದ ಕೊರತೆ'

Last Updated 5 ಏಪ್ರಿಲ್ 2013, 7:25 IST
ಅಕ್ಷರ ಗಾತ್ರ

ಹಾಸನ: ನಗರದ ಆರ್.ಸಿ.ರಸ್ತೆಯಲ್ಲಿರುವ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಆವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ಪುಸ್ತಕೋತ್ಸವಕ್ಕೆ ಬುಧವಾರ ಡಾ. ಗುರುರಾಜ ಹೆಬ್ಬಾರ್ ಚಾಲನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಬುಧವಾರ ಲೇಖಕಿ ಶೈಲಜಾ ಹಾಸನ ಅವರ `ಇಳಾ' ಕಾದಂಬರಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶೈಲಜಾ, `ಇಳಾ ಕಾದಂಬರಿ ಸಮಯ ಕ್ಲ್ಲೊಲಲು ಬರೆದ ಸಾಹಿತ್ಯವಲ್ಲ. ರೈತರ ಬವಣೆಯನ್ನು ಹತ್ತಿರದಿಂದ ನೋಡಿದ್ದೇನೆ. ಆ ಅನುಭವವೇ ಈ ಕೃತಿ ರಚನೆಗೆ ಕಾರಣವಾಯಿತು' ಎಂದರು.

ಕೃತಿ ಬಗ್ಗೆ ಮಾತಾನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾಯದರ್ಶಿ ಗೊರೂರು ಶಿವೇಶ್, `ಇಳಾ ಕಾದಂಬರಿ ಬಂಗಾರದ ಮನುಷ್ಯ ಕೃತಿಯನ್ನು ನೆನಪಿಸುತ್ತದೆ. ರೈತರ ನೋವು ನಲಿವುಗಳನ್ನು ವಿಷಯವಾಗಿಟ್ಟುಕೊಂಡು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಳಾ' ಕಾದಂಬರಿ ಪ್ರಮುಖ ಕೃತಿ ಎನಿಸುತ್ತದೆ. ಖಳನಾಯಕನೇ ಇಲ್ಲದ ಕೃತಿಯಾಗಿ ರುವುದರಿಂದ ಆಪ್ಯಾಯಮಾನವೆನಿಸುತ್ತದೆ' ಎಂದರು.

ದ್ಯಾವನೂರು ಮಂಜುನಾಥ ನಿರೂಪಿಸಿದರು. ಚಿನ್ನೇನಹಳ್ಳಿ ಸ್ವಾಮಿ ವಂದಿಸಿದರು.ಗುರುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ನಾಗೇಶ್ ಅವರ `ಮನಸು ಮಂದಾರ' ಮತ್ತು `ಬೆಂಡ್ ಅಂಡ್ ಮೆಂಡ್' ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಲ್  ಜನಾರ್ದನ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಸಂಜೆ 5ಗಂಟೆಗೆ ಚಿಂತಕ ಎಂ.ಸಿ.ಡೋಂಗ್ರೆ  ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಚಲಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT