ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಂಡೂರು: ಅರಣ್ಯ ಇಲಾಖೆಯು ಬಡರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಕಿಸಾನ್ ಸಭಾ ತಾಲ್ಲೂಕು ಘಟಕದ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

`ಸುಮಾರು ಅರ್ಧ ಶತಮಾನದಿಂದ ಅರಣ್ಯಭೂಮಿಯಲ್ಲಿ ಉಳುಮೆ ಮಾಡಿ ಬದುಕುತ್ತಿರುವ ಬಡ ರೈತರಿಗೆ ಈಗ ಸಾಗುವಳಿ ಮಾಡದಂತೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ. ಅತಿಕ್ರಮಣವನ್ನು ಸಕ್ರಮಗೊಳಿಸುವ ಆದೇಶವಿದ್ದು, ಈ ನಿಟ್ಟಿನಲ್ಲಿ ರೈತರನ್ನು ಗುರುತಿಸಿ ಸಕ್ರಮಗೊಳಿಸುವ ಪ್ರಕ್ರಿಯೆ ಇಲ್ಲಿಯವರೆಗೂ ನಡೆದಿಲ್ಲ. ರೈತರ ಅತಿಕ್ರಮಣ ಸಕ್ರಮಗೊಳಿಸುವ 2ನೇ ಆದೇಶ (1980)ವಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ~ ಎಂದು ಕಿಸಾನ್ ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅಂತಾಪುರ, ಚಿಕ್ಕಂತಾಪುರ, ಸುಲ್ತಾನಪುರ ಗ್ರಾಮಸ್ಥರು ಮತ್ತು ರೈತರಿಗೆ ಜಿಂದಾಲ್‌ನ ಪದ್ಮಾವತಿ , ಕೆ.ಎಂ.ಎಂ.ಐ, ಐಎಸ್‌ಟಿ, ಮೆದು ಕಬ್ಬಿಣ ಘಟಕದಿಂದ ಎಂದು ಕಿಸಾನ್ ಸಭಾದ  ಉಪಾಧ್ಯಕ್ಷ ಬಿ. ವಿರೇಶಪ್ಪ ಆರೋಪಿಸಿದರು. 

ಕಾರ್ಯದರ್ಶಿ ಆರ್.ಸ್ವಾಮಿ, ಸಂಚಾಲಕ ಬಿ.ಅಬ್ದುಲ್, ಚಾಂದ್ ಹುಸೇನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿ.ನಾಗರತ್ನಮ್ಮ, ಪೀರಮ್ಮಾ, ಸರೋಜಮ್ಮಾ, ಜಿ.ಈರಮ್ಮಾ, ಸಾವಿತ್ರಿಬಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT