ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಕೆಆರ್‌ಎಸ್

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಮಂಡ್ಯ: ಕೊಡಗು ಮತ್ತು ಸುತ್ತಮುತ್ತಲಿನ  ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ  ನೀರು ಹರಿದು ಬರುತ್ತಿದೆ. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು  ಕುಡಿಯುವ ನೀರಿಗಾಗಿ ಈ ಜಲಾಶಯ ಅವಲಂಬಿಸಿರುವ ಮೈಸೂರು ಹಾಗೂ ಬೆಂಗಳೂರು ನಾಗರಿಕರ ಮೊಗದಲ್ಲಿ ಮಂದಹಾಸ ಮೂಡಿದೆ. 

ಜಲಾಶಯದ ಒಳಹರಿವು 44,972 ಕ್ಯೂಸೆಕ್ ಆಗಿದೆ, 1,557 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ನೀರಿನಮಟ್ಟವು 100 ಅಡಿಗಳ ಅಂಚಿಗೆ ಬಂದು ನಿಂತಿದೆ. ಒಂದೇ ದಿನದಲ್ಲಿ 5 ಅಡಿಯಷ್ಟು ಹೆಚ್ಚು ನೀರು ಬಂದಿದೆ. ಜೂನ್ 12ರಂದು ಜಲಾಶಯದ ನೀರಿನಮಟ್ಟ 63 ಅಡಿಗೆ ಕುಸಿದಿತ್ತು,  ಹತ್ತು ವರ್ಷಗಳಲ್ಲಿ ನೀರಿನಮಟ್ಟ ಇಷ್ಟು ಕಡಿಮೆಯಾಗಿದ್ದು ಇದೇ ಮೊದಲು. ನಂತರ ಕೆ.ಆರ್.ಎಸ್‌ನಲ್ಲಿ ನೀರಿನ ಮಟ್ಟ ದಿನ ದಿನಕ್ಕೆ ಹೆಚ್ಚಳವಾಯಿತು. ಇದನ್ನು ಈ ನಾಲ್ಕು ಚಿತ್ರಗಳಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT