ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಂಕಷ್ಟಕ್ಕೆ ವರ್ತಕರ ಧೋರಣೆ ಕಾರಣ

ಅನಾವೃಷ್ಟಿಗೆ ಶೇ.50 ತೆಂಗು ಬೆಳೆ ಬಲಿ
Last Updated 30 ಸೆಪ್ಟೆಂಬರ್ 2013, 11:12 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ:  ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರ ವ್ಯಾಪಾರಿ ಧೋರಣೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆ ಎಂದರೆ ರೈತರು ಭಯ ಪಡುವಂತಾಗಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಹಿತ್ತಲಮನಿ ಟೀಕಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ 1 ದಿನದ ಕಾರ್ಯಾ-­ಗಾರ­ದಲ್ಲಿ ಮಾತನಾಡಿ, ಬೆಲೆ ಕುಸಿತ ತೆಂಗು ಬೆಳೆಗಾರರ ಅಧೋಗತಿಗೆ ಕಾರಣ­ವಾಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದಂತೆ ವರ್ತಕರು ಷಢ್ಯಂತ್ರ ರೂಪಿ­ಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ  ಎಚ್.ಆರ್.ಶಶಿಧರ್ ಮಾತನಾಡಿ,  ಅನಾ­­ವೃಷ್ಟಿ­­ಯಿಂದ ತಾಲ್ಲೂಕಿನಲ್ಲಿ ಶೇ.50ಕ್ಕೂ ಹೆಚ್ಚು ತೆಂಗಿನ ಮರಗಳು ಒಣಗಿವೆ. ಅಧಿಕಾರಿಗಳು ಲಂಚ ತೆಗೆದು­ಕೊಂಡ ಕುಳಿತಲ್ಲೇ ಬೆಳೆ ಹಾನಿಯ ವರದಿ ತಯಾರಿಸುವುದನ್ನು ಬಿಟ್ಟು ರೈತರ ತೋಟ­ಗಳಿಗೆ ಖುದ್ದಾಗಿ ತೆರಳಿ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರು­­ಕಟ್ಟೆ ಸಮಿತಿ ಅಧ್ಯಕ್ಷ  ಎಂ.ಎನ್.­ಶಿವರಾಜ್ ಮಾತನಾಡಿ, ಸಂಘಟನೆ ತಳ ಗಟ್ಟಿಯಾದರೆ ರೈತರ ಭವಿಷ್ಯ ಭದ್ರ ಎಂದರು.

ಹಸಿರು ಸೇನೆ ರಾಜ್ಯಾಧ್ಯಕ್ಷ ಕೆಂಕೆರೆ ಸತೀಶ್ ‘ಪಕ್ಷ ಜಾತಿ ಮಿರಿ ಒಗ್ಗಟ್ಟಾಗಿ ಹೋರಾಡಿ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿಂಗದ­ಹಳ್ಳಿ ರಾಜ್‌ಕುಮಾರ್ ಮಾತನಾಡಿ, ತೆಂಗು ಬೆಳೆಗಾರರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು. ವಿದ್ಯುತ್ ಅನ್ನು ರೈತರಿಗೆ ಕಲ್ಪಿಸುವಲ್ಲಿ  ಈ ಭಾಗದ ಜನ­ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜಿ.ಪಂ.ಸದಸ್ಯರಾದ ಲೋಹಿತಾ­ಬಾಯಿ, ಎಚ್.ಬಿ.ಪಂಚಾ­ಕ್ಷರಯ್ಯ, ನಾಫೆಡ್ ಮುಚ್ಚಬಾರದು. ಬೆಳೆಗಾರರ ಸಮಿತಿ­ಗಳನ್ನು ರಚಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ತೆಂಗು ಬೆಳೆಗಾರರ ಸಂಘದ ರಾಜ್ಯ ಸಂಚಾ­ಲಕ ಸಿದ್ಧಬಸಪ್ಪ ಮಾತ­ನಾಡಿ ತಾಲ್ಲೂ­ಕಿನಲ್ಲಿ ತೆಂಗು ಬೆಳೆಗಾರರು ಸಂಘ­ಟಿತರಾಗುವಲ್ಲಿ ವಿಫಲವಾಗಿದ್ದಾರೆ. ಈಗ­ಲಾದರೂ ಒಗ್ಗೂಡಿ ಎಂದು ಕಿವಿಮಾತು ಹೇಳಿದರು.  ಉದ್ಯಮಿ ಜಯ­ಚಂದ್ರ ತೆಂಗು ಮೌಲ್ಯ­­ವರ್ಧನೆಯಲ್ಲಿ ಕೈಗೊಂಡ ಪ್ರಯೋಗ­­ಗಳನ್ನು ವಿವರಿ­ಸಿದರು.­

ತಾಲ್ಲೂಕು ತೆಂಗು­ಬೆಳೆಗಾರರ ಸಂಘದ ಅಧ್ಯಕ್ಷ ಜೆ.ಆರ್.ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು.  ಜಿ.ಪಂ. ಸದಸ್ಯರಾದ ಎಸ್.ಜಿ.­­ಮಂಜುಳಾ, ನಿಂಗಮ್ಮ, ಜಾನಮ್ಮ, ತಾ.ಪಂ.­ಸದಸ್ಯ ನಿರಂಜನ­ಮೂರ್ತಿ, ಜಿ.ಎಸ್.­ಚನ್ನಬಸಪ್ಪ, ತೋಟ­ಗಾರಿಕೆ ಇಲಾಖೆಯ ಡಾ.ದುಂಡಿ, ಜಿಲ್ಲಾ ನಿರ್ದೇಶಕಿ ಸುಜಾತಾ, ಉಪ­ನಿರ್ದೇ­ಶಕಿ ಮಹಾಲಕ್ಷ್ಮೀ, ವಿಜ್ಞಾನಿ­ಗ­ಳಾದ ಡಾ.ಪಿ.ಬಿ.­­­ಬಸವ­ರಾಜ್, ಡಾ.ವಿ.­ದೇವಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT