ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆಗಳ ಪರಿಹಾರವೇ ಗುರಿ

Last Updated 23 ಏಪ್ರಿಲ್ 2013, 5:45 IST
ಅಕ್ಷರ ಗಾತ್ರ

ಮಂಡ್ಯ: ರೈತಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಕೆ.ಎಸ್. ನಂಜುಂಡೇಗೌಡ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಕರ್ನಾಟಕ ಸರ್ವೋದಯ ಪಕ್ಷದಿಂದ ಆರನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಪ್ರತಿ ಬಾರಿಯೂ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊ ಳ್ಳುತ್ತಾ ಸಾಗಿದ್ದಾರೆ. ಆದರೆ ಗೆಲುವಿನ ಗೆರೆಯನ್ನು ಮುಟ್ಟಲಾಗಿಲ್ಲ. ಈ ಬಾರಿ ಆ ಗೆರೆಯನ್ನು ಮುಟ್ಟಲು ಸುಸಜ್ಜಿತವಾಗಿ ವ್ಯಾಪಕ ಪ್ರಚಾರ ಕೈಗೊಂಡಿರುವ ಅವರೊಂದಿಗೆ ನಡೆಸಿದ `ಪ್ರಜಾವಾಣಿ' ಸಂದರ್ಶನ ಇಂತಿದೆ.

ಪ್ರ-ಕ್ಷೇತ್ರದಲ್ಲಿ ಪ್ರಚಾರ ಹೇಗೆ ಸಾಗಿದೆ?
ಪ್ರಚಾರ ವ್ಯವಸ್ಥಿತವಾಗಿ ನಡೆದಿದೆ. ಒಂದೂವರೆ ತಿಂಗಳಿನಿಂದ ಮತದಾನ ಯಾಕೆ ಮಾಡಬೇಕು. ಹಣ ಹಾಗೂ ಹೆಂಡಕ್ಕೆ ಮತಗಳನ್ನು ಮಾರಾಟ ಮಾಡಿಕೊಳ್ಳಬಾರದು. ಮಾಡಿಕೊಂಡರೆ ಐದು ವರ್ಷಗಳ ಕಾಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗೆಗೆ ಜಾಗೃತಿ ಮೂಡಿಸಿದ್ದೇವೆ.
ಜನರಿಗೆ ಈ ಬಾರಿ ನೀರಿನ ಮಹತ್ವ ಗೊತ್ತಾಗಿದೆ. ನೀರಿನ ಉಳಿಯುವಿಕೆಗಾಗಿ ಯಾರು ಹೋರಾಟ ಮಾಡುತ್ತಾರೆ ಎಂಬುದೂ ಜನರಿಗೆ ತಿಳಿಸಿದೆ. ಆದ್ದರಿಂದ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಕೋರುತ್ತಿದ್ದೇನೆ.

ಪ್ರ-ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆ ಹೇಗೆ ಭಿನ್ನವಾಗಿದೆ?

ಈ ಬಾರಿ ಕಾಂಗ್ರೆಸ್‌ನಿಂದ ಇಬ್ಬರು ಅಭ್ಯರ್ಥಿಗಳು ನಿಂತಿರುವುದು ಮತಗಳು ಹಂಚಿಕೆಯಾಗಲಿವೆ. ನನಗೆ ಕೆಜೆಪಿ ಬೆಂಬಲ ನೀಡಿರುವುದರಿಂದ ಹೆಚ್ಚಿನ ಬಲ ದೊರೆತಿದೆ. ಐದು ಬಾರಿ ಸೋತಿರುವುದು ಜನರ ಮನದಲ್ಲಿ ಅನುಕಂಪ ಮೂಡಿಸಿದೆ.

ಪ್ರ- ರೈತರ ಸಮಸ್ಯೆಗಳೇನು?
ಸಮಸ್ಯೆಗಳು ಬಹಳಷ್ಟಿವೆ. ಆದರೆ ಪರಿಹಾರ ಸಿಕ್ಕಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗುವುದಿಲ್ಲ. ಕಾವೇರಿ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಗೊಬ್ಬರ, ಬೀಜಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ವಿದ್ಯುತ್ ಕಡಿತ ಹೆಚ್ಚಾಗಿದೆ. ರೈತರ ಬದುಕು   ಪೂರ್ತಿ ದುಸ್ತರವಾಗಿದೆ.


ಪ್ರ-ನಿಮಗೆ ಯಾಕೆ ಮತ ನೀಡಬೇಕು?
ಚುನಾವಣೆಯಲ್ಲಿ ಸೋಲಿಸಿದ ನಂತರವೂ ರೈತರ ಪರ ಹೋರಾಟಗಳನ್ನು ಮುಂದುವರಿಸಿದ್ದೇನೆ. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರ ಸಮಸ್ಯೆಗಳ ಬಗೆಗೆ ಸರ್ಕಾರದ ಗಮನ ಸೆಳೆಯುತ್ತೇನೆ.

ಪ್ರ-ನಿಮ್ಮ ಭರವಸೆಗಳು ಏನು?
ರೈತರಿಗೆ ಆಗುವ ಅನ್ಯಾಯ ತಡೆಯ ಲಾಗು ವುದು. ಬೆಳೆದ ಉತ್ಪನ್ನ ಗಳಿಗೆ ಉತ್ತಮ ಬೆಲೆ ದೊರಕಿಸುವುದು. ಪೊಲೀಸ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ. ಪ್ರವಾಸೋದ್ಯಮ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT