ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಒಕ್ಕಲೆಬ್ಬಿಸದಿರಲು ಮನವಿ

Last Updated 4 ಜೂನ್ 2013, 5:10 IST
ಅಕ್ಷರ ಗಾತ್ರ

ಸಂಡೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮ ವಾರ ಸಂಡೂರಿನ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ತಹಶೀಲ್ದಾರ್ ಆರ್. ತಿಮ್ಮಯ್ಯ ನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ತಾಲ್ಲೂಕಿನಾದ್ಯಂತ ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡು ತ್ತಿರುವ ರೈತರನ್ನು ಸಾಗುವಳಿ ಜಮೀನು ಗಳಿಂದ ಒಕ್ಕಲೆಬ್ಬಿಸುತ್ತಿರುವುದನ್ನು ತಡೆಯಬೇಕು. ಅರ್ಹರಿಗೆ ಪರ್ಯಾಯ ಭೂಮಿ ಕೊಡಬೇಕು. ಇಲ್ಲವೇ ಅದೇ ಬಗರ್ ಹುಕುಂ ಜಮೀನುಗಳಲ್ಲಿ ಸಾಗು ವಳಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಕಿಸಾನ್ ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಆರ್.ಸ್ವಾಮಿ, ಆರ್. ಶಿವರಾಂ ಮಾತನಾಡಿ, ಬಗರ್ ಹುಕುಂ ಜಮೀನುಗಳಲ್ಲಿ ಸೆಟ್ಲಮೆಂಟ್ ಸರ್ವೆ ಮಾಡಿ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನುಗಳನ್ನು ಬೇರ್ಪಡಿಸದೆ, ಅರಣ್ಯ ಇಲಾಖೆ ಜಮೀನುಗಳಲ್ಲಿ ಗುಂಡಿ ತೆಗೆಯುವ ಮೂಲಕ ಬಡ ರೈತರನ್ನು ಸಾಗುವಳಿ ಜಮೀನುಗಳಿಂದ ಹೊರ ಹಾಕುತ್ತಿ ದ್ದರೂ,  ಆಡಳಿತ ವರ್ಗ ರೈತರ ಪರ ವಾಗಿ ಕ್ರಮಕೈಗೊಳ್ಳದೆ ಇರುವುದು ಶೋಚನೀಯ ಸಂಗತಿ ಎಂದರು.

ಅಧಿಕಾರಿಗಳ ಕ್ರಮದಿಂದ ಬಗರ್ ಹುಕುಂ ಜಮೀನುಗಳನ್ನು ಆಶ್ರಯಿ ಸಿರುವ ಸಾವಿರಾರು ಬಡ ರೈತ ಕುಟುಂಬ ಗಳು ಅತಂತ್ರ ಸ್ಥಿತಿಯನ್ನು ಎದುರಿಸು ವಂತಾಗಿದೆ.  ಸರ್ಕಾರ ಮತ್ತು ತಾಲ್ಲೂಕು ಆಡಳಿತ ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಬಗರ್ ಹುಕುಂ ಜಮೀನುಗಳಲ್ಲಿ ಸಾಗುವಳಿ ಮಾಡಿ ಬದುಕಲು ಅವಕಾಶ ಕಲ್ಪಿಸಿ ಕೊಡಬೇಕು. ಕಂದಾಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಗುರುತಿಸುವ ಮೂಲಕ ಸಾಗುವಳಿ ಚೀಟಿ ಕೊಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ತಾರಾನಗರ, ಗೌರಿಪುರ, ಬನ್ನಿಹಟ್ಟಿ, ಚಿಕ್ಕಂತಾಪುರ, ಸಂಡೂರು, ಜೈಸಿಂಗಪುರ ಗ್ರಾಮಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳನ್ನು ಸಾಗುವಳಿ ಮಾಡದ ಶ್ರೀಮಂತ ಶಾಹಿಗಳು ತಮ್ಮ ಹೆಸರಿಗೆ ಹಕ್ಕು ಪತ್ರ ಪಡೆದು ಬೇರೆಯವರಿಗೆ ಮಾರಾಟ ಮಾಡಿ, ಅಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಜಮೀನು ಗಳಿಂದ ಹೊರ ಹಾಕುವ ಹುನ್ನಾರ ನಡೆಸಿದ್ದಾರೆ.

ಇಂತಹವುಗಳನ್ನು ಸೂಕ್ತ ತನಿಖೆ ಮಾಡಿ, ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಕಿಸಾನ್ ಸಭಾದ ಮುಖಂಡರಾದ ಬಿ.ವೀರೇಶ್, ತಾಲ್ಲೂಕು ಸಂಚಾಲಕ ಅಬ್ದುಲ್ ಬಾಕೈ, ಹುಲುಗಪ್ಪ, ಬನ್ನಿ ಹಟ್ಟಿ ಸಾರಪ್ಪ, ತಾರಾನಗರದ ರಾಮಾಂಜಿನಿ, ವಿ.ನಾಗಲಾಪುರದ ಬೋಗೇಶಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT