ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಖರೀದಿಸುವ ಹಾಲು ದರ ₨ 1.25 ಹೆಚ್ಚಳ

Last Updated 2 ಜನವರಿ 2014, 9:22 IST
ಅಕ್ಷರ ಗಾತ್ರ

ತುಮಕೂರು: ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₨ 1.25 ದರ ಹೆಚ್ಚಿಸಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟ ತಿಳಿಸಿದೆ.

ಹೊಸ ದರವು ಜ. 1ರಿಂದ ಜಾರಿಯಾಗಲಿದೆ. ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₨ 22.25, ಸಹಕಾರ ಸಂಘದಿಂದ ಒಕ್ಕೂಟ ಖರೀದಿಸುವ ಪ್ರತಿ ಕೆ.ಜಿ. ಹಾಲಿಗೆ ₨ 22.76 ದರ ನಿಗದಿಯಾಗಿದೆ (ಶೇ 3.5 ಜಿಡ್ಡು ಹಾಗೂ ಶೇ 8.5 ಎಸ್‌ಎನ್‌ಎಫ್‌). ಬರಗಾಲದಿಂದ ಕಂಗಾಲಾಗಿರುವ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಡೇರಿ ಬೆಲೆ ಹೆಚ್ಚಳದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT