ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೂ ನಿವೃತ್ತಿ ವೇತನ ನೀಡಲಿ!

Last Updated 17 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

‘ಪ್ರತ್ಯೇಕ ಕೃಷಿ ಬಜೆಟ್; ರೈತರ ಮೂಗಿಗೆ ತುಪ್ಪ’ ಶಿವಸುಂದರ್ ಅವರ ಲೇಖನ (ಸಂಗತ, ಫೆ.16)ಸಮಯೋಚಿತವಾಗಿದೆ. ಸರ್ಕಾರ ತನ್ನ ಉದ್ದೇಶಿತ ಕೃಷಿ ಬಜೆಟ್‌ನಲ್ಲಿ ರೈತರ ಮೇಲಿನ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಪ್ರದರ್ಶಿಸಬೇಕಿದೆ.

ಅವುಗಳ ಜೊತೆಗೆ ಜೀವನದುದ್ದಕ್ಕೂ ಅಭದ್ರತೆಯ ಸುಳಿಯಲ್ಲೇ ಸಿಕ್ಕಿ ನರಳುವ ರೈತರಿಗೆ ಒಂದು ನಿರ್ದಿಷ್ಟ ಆದಾಯದ ಖಾತರಿಯನ್ನು ನೀಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ರೈತ ಆಯೋಗದ ಸಲಹೆಯಂತೆ ರೈತರಿಗಾಗಿ ಒಂದು ಆದಾಯ ಖಾತರಿ ಆಯೋಗವನ್ನು ರಚಿಸಬೇಕು. ಜೊತೆಗೆ 60 ವರ್ಷ ಸತತವಾಗಿ ಕೃಷಿಯಲ್ಲಿ ತೊಡಗಿಸಿಕೊಂಡ ರೈತರಿಗೆ ಮಾಹೆಯಾನ ಕನಿಷ್ಠ ಐದು ಸಾವಿರ ರೂಪಾಯಿ ನಿವೃತ್ತಿ ವೇತನ ನಿಗದಿಪಡಿಸಬೇಕು.

ಸಹಕಾರಿ ವಲಯ ಹಾಗೂ ಬ್ಯಾಂಕ್‌ಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ದರವನ್ನು ಶೇ1ಕ್ಕೆ ನಿಗದಿ ಪಡಿಸಿರುವ ಸರ್ಕಾರ ಅದನ್ನು ಮೈಕ್ರೋ ಹಣಕಾಸು ಸಂಸ್ಥೆಗಳಿಗೂ ( ಸದ್ಯ ಶೇ 24 ರಿಂದ ಶೇ36 ಇದೆ) ವಿಸ್ತರಿಸಬೇಕು. ಕುಲಾಂತರಿ ತಳಿಗಳನ್ನು ಸಂಪೂರ್ಣ ನಿಷೇಧಿಸಬೇಕು.

ಸರ್ಕಾರ ರೈತರನ್ನು ಚೀನಾಕ್ಕೆ ಕಳಿಸುವ ಬದಲು ಪಕ್ಕದ ಆಂಧ್ರ ಪ್ರದೇಶಕ್ಕೆ ಕಳಿಸಿದರೆ ಅಲ್ಲಿನ ರೈತರು ಹೇಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸದೇ ಉತ್ತಮ ಇಳುವರಿ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಅಧ್ಯಯನ ಮಾಡಿ ಅದನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT