ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು–ಷೇರುದಾರರ ನಡುವೆ ಗಲಾಟೆ

ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ
Last Updated 17 ಸೆಪ್ಟೆಂಬರ್ 2013, 5:45 IST
ಅಕ್ಷರ ಗಾತ್ರ

ಮುಂಡರಗಿ: ಸಕ್ಕರೆ ವಿತರಿಸುವ ಕುರಿತಂತೆ ಮೃಡಗಿರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ರೈತರು ಮತ್ತು ಷೇರುದಾರರ ನಡುವೆ ತೀವ್ರ ಗಲಾಟೆ ಸಂಭವಿಸಿ, ಒಬ್ಬ ವ್ಯಕ್ತಿ ತೀವ್ರವಾಗಿ ಗಾಯ­ಗೊಂಡಿರುವ ಘಟನೆ ತಾಲ್ಲೂಕಿನ ಗಂಗಾಪುರ ಗ್ರಾಮ­ದಲ್ಲಿರುವ ಮೃಡಗಿರಿ ಸಹಕಾರಿ ಸಕ್ಕರೆ ­ ಭಾನುವಾರ ನಡೆದಿದೆ. ಗಾಯಾಳು­ವನ್ನು  ಕಲಕೇರಿ ಗ್ರಾಮದ ಈಶ್ವರ ಸಜ್ಜನರ ಎಂದು ಗುರುತಿಸಲಾಗಿದೆ.

ಭಾನುವಾರ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ವಾರ್ಷಿಕ ಮಹಾಸಭೆ­ಯನ್ನು ಕಾರ್ಖಾನೆ ಆವರಣದಲ್ಲಿ ಏರ್ಪಡಿಸ­ಲಾಗಿತ್ತು. ಸಭೆ ಪ್ರಾರಂಭ­ವಾಗುತ್ತಿದ್ದಂತೆ ರೈತರು ತಮಗೆ ಈ ಹಿಂದೆ ತಿಳಿಸಿದಂತೆ 10 ಕೆಜಿ ಸಕ್ಕರೆ ನೀಡಿ ಎಂದು ಕೇಳಿಕೊಂಡರು. ಹಮ್ಮಿಗಿ ಜಿಲ್ಲಾ ಪಂಚಾಯಿತಿ ಉಪಚುನಾವಣೆ ನಡೆಯುತ್ತಿರುವು ­ದರಿಂದ ಸಕ್ಕರೆ ವಿತರಣೆಗೆ ಚುನಾ­ವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದು ಆಡಳಿತ ಮಂಡಳಿಯವರು ಸಕ್ಕರೆ ವಿತರಿಸು­ವು­ದಿಲ್ಲ ಎಂದು ತಿಳಿಸಿದರು. ಇದರಿಂದ ರೈತರು ಮತ್ತು ಆಡಳಿತ ಮಂಡಳಿಯ ನಡುವೆ ವಾಗ್ವಾದ ನಡೆಯಿತು.

ಕಾರ್ಖಾನೆ ಷೇರುದಾರಿಗೆ ಪ್ರತಿವರ್ಷ ವಾರ್ಷಿಕ ಮಹಾಸಭೆಯ ಸಂದರ್ಭ­ದಲ್ಲಿ 10 ಕೆಜಿ ಸಕ್ಕರೆ ನೀಡುವುದಾಗಿ ಆಡಳಿತ ಮಂಡಳಿಯವರು ಈ ಹಿಂದೆ ತಿಳಿಸಿದ್ದರು. ಆದರೆ ಕಳೆದ ವರ್ಷ ನಮಗೆ ಸಕ್ಕರೆ ನೀಡಲಿಲ್ಲ. ಈ ವರ್ಷವೂ ಮತ್ತೊಂದು ಕಾರಣ ಹೇಳುತ್ತಿದ್ದಾರೆ ಎಂದು ರೈತರು ದೂರಿದರು. ಕೋಪ­ಗೊಂಡ ಷೇರು­ದಾರರು ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ವಿರುದ್ಧ ಆಕ್ರೋಶ­ಗೊಂಡು ಗಲಾಟೆ ನಡೆಸಿ­ದರು ಎಂದು ತಿಳಿದುಬಂದಿದೆ. ಇದ­ರಿಂದ ಬೇಸರಗೊಂಡ ಎಸ್.ಎಸ್.­ಪಾಟೀ­ಲರು ಸಭೆ­ಯನ್ನು ಅರ್ಧಕ್ಕೆ ಮೊಟಕು­ಗೊಳಿಸಿ ಅಲ್ಲಿಂದ ಹೋಗಲು ಮುಂದಾ­ದಾಗ ರೈತರು ಅವರನ್ನು ತಡೆಯಲು ಪ್ರಯತ್ನಿ­ಸಿದರು.

ಬೇಲೂರು, ನವಲಗುಂದ, ನರಗುಂದ, ರೋಣ ಮೊದಲಾದ ಭಾಗಗಳಿಂದ ರೈತರು ಬಂದಿದ್ದರು. ಮೊದಲೆ ನೀತಿ ಸಂಹಿತೆ ಇರುವ ವಿಷಯ ತಿಳಿಸಿದ್ದರೆ ಸಭೆಗೆ ಬರು­ತ್ತಿರಲಿಲ್ಲ. ಈ ಭಾಗದಲ್ಲಿ ಉಪ ಚುನಾವಣೆ ಇರುವ ವಿಷಯ ನಿಮಗೆ ತಿಳಿದಿದ್ದರಿಂದ ಸಭೆ ನಡೆಸಲು ಮತ್ತೊಂದು ದಿನಾಂಕ ನಿಗದಿ ಮಾಡ­ಬೇಕಿತ್ತು ಎಂದು ರೈತರು ಆಗ್ರಹಿಸಿ­ದರು. ಜಿಲ್ಲಾ ಉಪವಿಭಾಗಾಧಿ­ಕಾರಿ ಐ.ಜೆ.ಗದ್ದಿಹಾಳ, ತಹಶೀಲ್ದಾರ್‌ ಎಸ್.ಆರ್­­­­. ಸಿರ­ಕೋಳ, ಸಿಪಿಐ ಸುನಿಲ್ ಸವದಿ ಸ್ಥಳಕ್ಕೆ ಭೇಟಿ ನೀಡಿ ರೈತರ ಮನ ಒಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT