ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಅಪಘಾತ: 15 ಮಂದಿ ಸಾವಿನ ಶಂಕೆ

Last Updated 13 ಸೆಪ್ಟೆಂಬರ್ 2011, 19:05 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್‌ಎಸ್): ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರಕೋಣಂನಲ್ಲಿ ಮಂಗಳವಾರ ರಾತ್ರಿ ಎರಡು ರೈಲುಗಳು ಡಿಕ್ಕಿ ಹೊಡೆದಿವೆ. ಸುಮಾರು 15 ಮಂದಿ ಸತ್ತಿರುವ ಮತ್ತು ಹಲವರು ಗಾಯಗೊಂಡಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 9.30ರ ವೇಳೆಯಲ್ಲಿ ಸಿಗ್ನಲ್‌ಗಾಗಿ ಕಾಯುತ್ತಿದ್ದ ಕಟ್ಪಾಡಿ ಪ್ರಯಾಣಿಕರ ರೈಲಿಗೆ ಚೆನ್ನೈ ಬೀಚ್ ವೆಲ್ಲೂರು ರೈಲು ಡಿಕ್ಕಿ ಹೊಡೆದಿದೆ.
 

ಭ್ರಷ್ಟಾಚಾರ ತಡೆಗೆ ಹೊಸ ಇಲಾಖೆ

ಡೆಹ್ರಾಡೂನ್ (ಪಿಟಿಐ): ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಭ್ರಷ್ಟಾಚಾರ ತಡೆಗೆ ಹೊಸದೊಂದು ಇಲಾಖೆ ರಚಿಸುವುದಾಗಿ ಉತ್ತರಾಖಂಡದ ನೂತನ ಮುಖ್ಯಮಂತ್ರಿ ಬಿ.ಸಿ. ಖಂಡೂರಿ ಮಂಗಳವಾರ ಘೋಷಿಸಿದ್ದಾರೆ.

ಗಡ್ಕರಿಗೆ ಶಸ್ತ್ರ ಚಿಕಿತ್ಸೆ

ನವದೆಹಲಿ (ಪಿಟಿಐ): ಮಧುಮೇಹ ಕಾಯಿಲೆ (ಮಾದರಿ-2) ಬಳಲುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಜಠರದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರಿ   ನೌಕರರಿಗೆ ಬೋನಸ್

ನವದೆಹಲಿ (ಪಿಟಿಐ): ದಸರಾ- ದೀಪಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಸಿ ಮತ್ತು ಡಿ ಗುಂಪಿನ ನೌಕರರು, ಸೇನೆ, ಅರೆಸೇನಾ ಪಡೆಗಳ ಸಿಬ್ಬಂದಿಗೆ ರೂ 3,500 ಮಧ್ಯಂತರ ಬೋನಸ್ ಅನ್ನು ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಮತ್ತೆ  ಪ್ರತಿಭಟನೆ- `ಜಾಟ್~ ಎಚ್ಚರಿಕೆ

ಹಿಸ್ಸಾರ್ (ಪಿಟಿಐ): ಮುಂದಿನ ಫೆಬ್ರುವರಿ ಒಳಗೆ ಒಬಿಸಿ ಕೋಟಾದಡಿ ಸರ್ಕಾರಿ ಉದ್ಯೋಗದಲ್ಲಿ ಜಾಟ್ ಸಮುದಾಯದವರಿಗೆ ಮೀಸಲಾತಿ ನೀಡದಿದ್ದರೆ ಮತ್ತೆ ಪ್ರತಿಭಟನೆಯನ್ನು ಆರಂಭಿಸುವುದಾಗಿ ಹರಿಯಾಣ ಸರ್ಕಾರಕ್ಕೆ ಜಾಟ್ ಸಮುದಾಯ ಮಂಗಳವಾರ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT