ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಅಪಘಾತ ತಡೆಗೆ ನೂತನ ತಂತ್ರಜ್ಞಾನ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಐ): ಪದೇ ಪದೇ ಆಗುತ್ತಿರುವ ರೈಲು ಅಪಘಾತಗಳಿಂದ ಆತಂಕಕ್ಕೆ ಒಳಗಾಗಿರುವ ರೈಲ್ವೆ ಇಲಾಖೆಯು, 800 ಕಿ.ಮೀ ಉದ್ದದ ರೈಲು ಮಾರ್ಗದಲ್ಲಿ ರಕ್ಷಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಿದೆ.

ಐರೋಪ್ಯ ತಂತ್ರಜ್ಞಾನದ ಈ ವ್ಯವಸ್ಥೆ ಅಳವಡಿಸಲು ಪ್ರತಿ ಕಿಲೊ ಮೀಟರ್‌ಗೆ ರೂ 50 ಲಕ್ಷ ವೆಚ್ಚವಾಗಲಿದೆ.

ರೈಲಿನ ಚಾಲಕ ಕೆಂಪು ದೀಪದ ಸೂಚನೆಯನ್ನು ಉಲ್ಲಂಘಿಸಿ ಮುಂದೆ ಸಾಗಲು ಪ್ರಯತ್ನಿಸಿದಾಗ ಅಥವಾ ತುರ್ತು ಸಂದರ್ಭದಲ್ಲಿ ತನ್ನಿಂದತಾನೇ ಬ್ರೇಕ್ ಹಾಕಲು ಈ ಹೊಸ ವ್ಯವಸ್ಥೆಯಿಂದ ಸಾಧ್ಯವಾಗುತ್ತದೆ.

ಇದರ ಪರೀಕ್ಷಾ ಕಾರ್ಯ ಅಂತಿಮ ಹಂತದಲ್ಲಿದ್ದು, ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಹೊಂದಿದ ಮಾರ್ಗಗಳಲ್ಲಿ ಅಳವಡಿಸಲು ಕೆಲವು ಮಾರ್ಪಾ ಡುಗಳನ್ನು ಮಾಡಿಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT